ಐಎಸ್ಎಫ್: ಬಾಬರಿ ಮಸ್ಜಿದ್ ‌ಮರಳಿ‌ ಪಡೆಯೋಣ, ಭಾರತವನ್ನು‌ ಮರಳಿ ಗಳಿಸೋಣ ಅಭಿಯಾನ

Update: 2018-12-27 06:18 GMT

ದಮ್ಮಾಮ್, ಡಿ. 27: ಇಂಡಿಯನ್ ಸೋಶಿಯಲ್ ಫೋರಂ (ಐಎಸ್ಎಫ್) ಕರ್ನಾಟಕ ಘಟಕದ ವತಿಯಿಂದ ಬಾಬರಿ‌‌ ಮಸ್ಜಿದ್ ‌ಮರಳಿ ಪಡೆಯೋಣ, ಭಾರತವನ್ನು ಮರಳಿ ಗಳಿಸೋಣ ಎಂಬ 15 ದಿನಗಳ ಪ್ರಚಾರ ಅಭಿಯಾನವು ಪೂರ್ವ ಪ್ರಾಂತ್ಯದೆಲ್ಲಡೆ ನಡೆಯಿತು.

ಬಾಬರಿ ಮಸ್ಜಿದ್ ‌ದ್ವಂಸವನ್ನು ಕೋಮುವಾದದ ಭಾಗವಾಗಿ ಚಿತ್ರಿಸಿ ರಾಜಕೀಯದ ಲಾಭ ಪಡೆಯಲು ಯತ್ನಿಸುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಇದು ಸಂವಿಧಾನದ ಧ್ವಂಸ ಮತ್ತು ಪ್ರಜಾಪ್ರಭುತ್ವದ‌ ಕಗ್ಗೊಲೆ ಎಂದು ಜನರಲ್ಲಿ ಪ್ರಜ್ಞಾವಂತಿಕೆ ಮೂಡಿಸುವ ಸಲುವಾಗಿ ಅಭಿಯಾನವನ್ನು ಇಂಡಿಯನ್ ಸೋಶಿಯಲ್ ಫೋರಂ ನ ಕೇಂದ್ರ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಡಿ. 5 ರಂದು ಖೋಬರ್‌ ನ ಗಲ್ಫ್ ದರ್ಬಾರ್‌ ರೆಸ್ಟೋರೆಂಟ್ ನಲ್ಲಿ ಉದ್ಘಾಟಿಸಿ, ಡಿ. 22 ರಂದು ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಚರ್ಚಾ ಕೂಟವನ್ನು ನಡೆಸಿ‌‌, ಸಂವಿಧಾನವನ್ನು ಮರಳಿ ಗಳಿಸುವ ವಿಶ್ವಾಸದೊಂದಿಗೆ ಅಭಿಯಾನವನ್ನು ಜುಬೈಲ್ ನ ಕುಕ್ ಝೂನ್ ರೆಸ್ಟೋರೆಂಟ್ ನಲ್ಲಿ ಸಮಾರೋಪಗಳಿಸಲಾಯಿತು.

ಅಭಿಯಾನದ ಭಾಗವಾಗಿ ಹಲವಾರು ಸಂಘ ಸಂಸ್ಥೆಗಳೊಂದಿಗೆ ಚರ್ಚಾ ಕೂಟ ಏರ್ಪಾಡಿಸಿದಲ್ಲದೆ, ರೂಮ್ ಸಂದರ್ಶನಗಳನ್ನು ಮಾಡಿ ಸುಮಾರು 500 ಕ್ಕೂ ಹೆಚ್ಚು ಜನರಿಗೆ ಬಾಬರಿ ಮಸೀದಿಯ ಶಹೀದ್ ಮತ್ತು ಅದರಲ್ಲಿನ ರಾಜಕೀಯದ ಬಗ್ಗೆ ಅರಿವು ಮೂಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News