ಸ್ಮಿತ್ ಮೇಲಿನ ನಿಷೇಧ ಹಿಂಪಡೆದ ಬಾಂಗ್ಲಾ

Update: 2018-12-27 19:01 GMT

ಢಾಕಾ, ಡಿ.27: ಮುಂಬರುವ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವ್ ಸ್ಮಿತ್‌ಗೆ ವಿಧಿಸಿರುವ ನಿಷೇಧವನ್ನು ಹಿಂಪಡೆಯಲಾಗಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಚೆಂಡು ವಿರೂಪ ಪ್ರಕರಣದಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ಒಂದು ವರ್ಷ ನಿಷೇಧ ಎದುರಿಸುತ್ತಿರುವ ಸ್ಮಿತ್ 2019ರ ಜ.5 ರಿಂದ ಆರಂಭವಾಗಿ ಫೆ.8ರ ತನಕ ನಡೆಯಲಿರುವ ಬಿಪಿಎಲ್ ಟಿ-20 ಟೂರ್ನಿಯಲ್ಲಿ ಕಾಮಿಲ್ಲಾ ವಿಕ್ಟೋರಿಯನ್ಸ್ ಪರ ಆಡಬಹುದು. ಈಗಾಗಲೇ ವಿಕ್ಟೋರಿಯನ್ಸ್ ತಂಡದೊಂದಿಗೆ ಸಹಿ ಹಾಕಿರುವ ಸ್ಮಿತ್ ಪಾಕಿಸ್ತಾನಿ ಕ್ರಿಕೆಟಿಗ ಶುಐಬ್ ಮಲಿಕ್ ಬದಲಿಗೆ ಜನವರಿ ಮಧ್ಯಭಾಗದಲ್ಲಿ ಬಿಪಿಎಲ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರ ಆರಂಭಿಕ ಪಟ್ಟಿಯಲ್ಲಿಲ್ಲದ ಸ್ಮಿತ್‌ರನ್ನು ಟೂರ್ನಿಗೆ ಸೇರಿಸಿಕೊಳ್ಳಬಾರದು ಎಂದು ಫ್ರಾಂಚೈಸಿಗಳು ಆಕ್ಷೇಪವ್ಯಕ್ತಪಡಿಸಿದ ಕಾರಣ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಈ ಮೊದಲು ಸ್ಮಿತ್ ಟೂರ್ನಿಯಲ್ಲಿ ಭಾಗವಹಿಸುವುದಕ್ಕೆ ತಡೆ ಹೇರಿತ್ತು. ಆಸ್ಟ್ರೇಲಿಯದ ಮಾಜಿ ಉಪ ನಾಯಕ ಡೇವಿಡ್ ವಾರ್ನರ್ ಬಿಪಿಎಲ್ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು ಸಿಲೆಟ್ ಸಿಕ್ಸರ್ ತಂಡದೊಂದಿಗೆ ಸಹಿ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News