ಬೆಂಗಳೂರು ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಆಯ್ಕೆ
ಬೆಂಗಳೂರು, ಡಿ.28: ಪ್ರತಿ ವರ್ಷದಂತೆ ಈ ಬಾರಿಯೂ ಪ್ರತಿಷ್ಠಿತ ಬೆಂಗಳೂರು ಪ್ರೆಸ್‌ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಈ ಬಾರಿ ಇನ್‌ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರನ್ನು ಪ್ರೆಸ್ ಕ್ಲಬ್‌ನ ಸದಸ್ಯರು ಆಯ್ಕೆ ಮಾಡಿದ್ದಾರೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಡಿ.31ರ ಸೋಮವಾರ ಸಂಜೆ ಪ್ರೆಸ್‌ಕ್ಲಬ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ 2018ನೆ ಸಾಲಿನ ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ ಗಳಿಗೆ ಹಿರಿಯ ಪತ್ರಕರ್ತರನ್ನು ಪ್ರೆಸ್‌ಕ್ಲಬ್ ಕಾರ್ಯಕಾರಿ ಸಮಿತಿ ಆಯ್ಕೆಮಾಡಿದೆ.
ಕೆ.ಎನ್. ತಿಲಕ್‌ಕುಮಾರ್, ರವಿ ಹೆಗಡೆ, ಕೆ.ಎಸ್. ಸಚ್ಚಿದಾನಂದ ಮೂರ್ತಿ(ಸಚ್ಚಿ), ತಿಮ್ಮಪ್ಪಭಟ್, ಎ. ಬಾಲಚಂದ್ರ, ವೆಂಕಟನಾರಾಯಣ, ರಾಮಣ್ಣ ಎಚ್. ಕೋಡಿ ಹೊಸಹಳ್ಳಿ, ತುಂಗರೇಣುಕ, ಕೆ. ವಿ.ಪ್ರಭಾಕರ್, ಡಿ.ಸಿ. ನಾಗೇಶ್, ರಾಜಶೇಖರ ಹತಗುಂದಿ, ವೇದಂ ಜಯಶಂಕರ್, ರಾಜಶೇಖರ ಅಬ್ಬೂರು, ಶಿವಾಜಿ ಗಣೇಶನ್, ಕೆ. ಬದ್ರುದ್ದೀನ್ ಮಾಣಿ ಅವರನ್ನು ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಎಚ್.ಡಿ. ಕುಮಾರಸ್ವಾಮಿ ಅವರು ಭಾಗವಹಿಸಿ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ.