ಶೀಘ್ರದಲ್ಲಿಯೇ ಹಸಿರು ಮಾರ್ಗದಲ್ಲಿ ಆರು ಬೋಗಿಗಳ ಮೆಟ್ರೋ ಸಂಚಾರ

Update: 2018-12-29 15:11 GMT

ಬೆಂಗಳೂರು, ಡಿ.29: ಜನವರಿ ಮೊದಲ ವಾರದಿಂದ ಹಸಿರು ಮಾರ್ಗದಲ್ಲಿ ನಾಲ್ಕನೇ ಆರು ಬೋಗಿಗಳ ಮೆಟ್ರೋ ಸಂಚಾರಕ್ಕೆ ಚಾಲನೆ ಸಿಗಲಿದೆ.

ಹಸಿರು ಮಾರ್ಗವಾದ ಯಲಚೇನಹಳ್ಳಿ- ನಾಗಸಂದ್ರ ನಡುವೆ ಸಂಚರಿಸುತ್ತಿರುವ ಮೆಟ್ರೋ ರೈಲು ಪ್ರಸ್ತುತ ನಾಲ್ಕು ಬೋಗಿಗಳನ್ನು ಹೊಂದಿದ್ದು ಈ ಮಾರ್ಗದಲ್ಲಿಯೂ ಪ್ರಯಾಣಕರ ಸಂಖ್ಯೆ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಆರು ಬೋಗಿಗಳ ಮೆಟ್ರೋ ರೈಲು ಜನವರಿ ಮೊದಲ ವಾರದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ.

ನೇರಳೆ ಮಾರ್ಗದಲ್ಲಿ(ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ) ಈಗಾಗಲೇ ಮೂರು 6 ಬೋಗಿಗಳ ರೈಲುಗಳು ಸಂಚರಿಸುತ್ತಿದ್ದು, ಹಸಿರು ಮಾರ್ಗದಲ್ಲಿಯೂ ಪೀಕ್ ಅವಧಿಯಲ್ಲಿ 6 ಬೋಗಿಗಳ ಮೆಟ್ರೋ ಸಂಚರಿಸಲಿದೆ. ಹಸಿರು ಮಾರ್ಗ ಲಾಲ್‌ಬಾಗ್ ಸಂಪರ್ಕವನ್ನು ಕಲ್ಪಿಸುತ್ತದೆ.

ರವಿವಾರ ಸೇರಿದಂತೆ ರಜಾ ದಿನಗಳಲ್ಲಿ ಲಾಲ್‌ಬಾಗ್‌ಗೆ ಹೆಚ್ಚು ಜನ ಭೇಟಿ ನೀಡುವ ಹಿನ್ನೆಲೆ ಪ್ರಯಾಣಕ್ಕಾಗಿ ಮೆಟ್ರೋ ಅವಲಂಬಿಸುತ್ತಾರೆ. ಹಸಿರು ಮಾರ್ಗದ ಮೆಟ್ರೋ ರೈಲನ್ನು ಪ್ರಥಮ ಬಾರಿಗೆ ಮಳೆಯರಿಗೆ ಪ್ರತ್ಯೇಕ ಬೋಗಿ ಮೀಸಲು ವ್ಯವಸ್ಥೆ ದೊರೆಯಲಿದ್ದು, ಬೋಗಿಯ ಪ್ರವೇಶ ದ್ವಾರ ಮಹಿಳೆಯರಿಗೆ ಮೀಸಲಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News