ಸದ್ದಾಂ ಹುಸೈನ್‌ಗೆ ಗಲ್ಲು

Update: 2018-12-29 18:44 GMT

1906: ಅಖಿಲ ಭಾರತ ಮುಸ್ಲಿಂ ಲೀಗ್ ಇಂದು ಪೂರ್ವ ಬಂಗಾಳದ ಢಾಕಾದಲ್ಲಿ ಸ್ಥಾಪನೆಯಾಯಿತು.

1922: ರಶ್ಯನ್ ಕ್ರಾಂತಿಕಾರಿ ವ್ಲಾದಿಮಿರ್ ಲೆನಿನ್ ಮಾರ್ಕ್ಸ್‌ವಾದಿ ಸಿದ್ಧಾಂತದ ವಿಸ್ತರಣಾ ಭಾಗವಾಗಿ ಸೋವಿಯತ್ ಒಕ್ಕೂಟವನ್ನು ಈ ದಿನ ರಚಿಸಿದರು. ರಶ್ಯಾ, ಬೆಲೊರಶ್ಯ, ಉಕ್ರೇನ್ ಮತ್ತಿತರ ದೇಶಗಳು ಈ ಒಕ್ಕೂಟದಲ್ಲಿದ್ದವು.

1934: ರಾಷ್ಟ್ರಸಂಘದ ಭಾಗವಾಗಲು ಅಮೆರಿಕದ ಅಧ್ಯಕ್ಷ ರೂಸ್‌ವೆಲ್ಟ್ ನಿರಾಕರಿಸಿದರು.

1935: ಇಟಾಲಿಯನ್ ಬಾಂಬರ್‌ಗಳು ಇಥಿಯೋಪಿಯಾದಲ್ಲಿದ್ದ ಸ್ವಿಟ್ಝರ್ಲೆಂಡ್‌ನ ರೆಡ್‌ಕ್ರಾಸ್ ಘಟಕವನ್ನು ನಾಶಗೈದರು.

1958: ಫಿಡೆಲ್ ಕ್ಯಾಸ್ಟ್ರೋ ನೇತೃತ್ವದ ಕ್ರಾಂತಿಕಾರಿ ಗೆರಿಲ್ಲಾ ಪಡೆ ಕ್ಯೂಬಾದ ಆಡಳಿತಾರೂಢ ಬ್ಯಾಟಿಸ್ಟಾ ಸರಕಾರದ ವಿರುದ್ಧ ಘನಘೋರ ಸಂಘರ್ಷಕ್ಕಿಳಿಯಿತು. ಎರಡು ದಿನಗಳ ನಂತರ ಅಧ್ಯಕ್ಷ ಬ್ಯಾಟಿಸ್ಟಾ ದೇಶ ಬಿಟ್ಟು ಪಲಾಯನಗೈದರು.

1987: ಜಿಂಬಾಬ್ವೆ ಅಧ್ಯಕ್ಷರಾಗಿ ರಾಬರ್ಟ್ ಮುಗಾಬೆ ಆಯ್ಕೆ

2006: ಮಾನವತಾ ವಿರೋಧಿ ಅಪರಾಧದ ಮೇಲೆ ಇರಾಕ್ ಅಧ್ಯಕ್ಷ ಸದ್ದಾಂ ಹುಸೈನ್‌ರನ್ನು ಇಂದು ಗಲ್ಲಿಗೇರಿಸಲಾಯಿತು. ಇದು ಅಮೆರಿಕನ್ ಸಾಮ್ರಾಜ್ಯಶಾಹಿ ಕುತಂತ್ರದ ಭಾಗವೆಂದು ಆರೋಪಿಸಲಾಯಿತು.

2013: ರಶ್ಯಾದ ವೊಲ್ಗಾಗಾರ್ಡ್‌ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಗೆ 14 ಜನಬಲಿಯಾದರು.

2016: 500 ಹಾಗೂ 1,000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ್ದರಿಂದ ಜನರು ತಮ್ಮ ಬಳಿಯಲ್ಲಿದ್ದ ಹಳೆಯ ನೋಟುಗಳನ್ನು ಬ್ಯಾಂಕ್‌ಗಳಿಗೆ ಮರಳಿಸಿ ಬೇರೆ ನೋಟುಗಳನ್ನು ಪಡೆಯಲು ಇಂದು ಕೊನೆಯ ದಿನವಾಗಿತ್ತು. 50 ದಿನಗಳೊಳಗೆ ಕಪ್ಪುಹಣ ಬ್ಯಾಂಕಿಂಗ್ ವ್ಯವಸ್ಥೆಗೆ ತರುತ್ತೇನೆ, ಭ್ರಷ್ಟಾಚಾರ ನಿಲ್ಲಿಸುತ್ತೇನೆ ಎಂಬ ಪ್ರಧಾನಿ ಮೋದಿ ಹೇಳಿಕೆ ಬಹುತೇಕ ಹುಸಿಯಾಯಿತು.

1987: ಹಿಂದಿ ಸಿನೆಮಾ ಸಂಗೀತ ನಿರ್ದೇಶಕ ದತ್ತ ನಾಯಕ ನಿಧನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ