ಬಾಲಿವುಡ್ ಹಿರಿಯ ನಟ ಖಾದರ್ ಖಾನ್ ನಿಧನ

Update: 2019-01-01 05:41 GMT

ಹೊಸದಿಲ್ಲಿ,ಜ.1: ಬಾಲಿವುಡ್‌ನ ಹಿರಿಯ ನಟ ಖಾದರ್ ಖಾನ್ ದೀರ್ಘಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ಕೆನಡಾದ ಆಸ್ಪತ್ರೆಯೊಂದರಲ್ಲಿ ಸೋಮವಾರ(ಡಿ.31) ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.

 "ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನನ್ನ ತಂದೆ ಸಂಜೆ 6 ಗಂಟೆಗೆ ಕೆನಡಾ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಮಧ್ಯಾಹ್ನದ ಬಳಿಕ ಕೋಮಾಕ್ಕೆ ಜಾರಿದ್ದರು. ಅವರು ಕಳೆದ 16-17 ವಾರಗಳಿಂದ ಆಸ್ಪತ್ರೆಯಲ್ಲಿದ್ದರು. ಅವರ ಅಂತ್ಯಕ್ರಿಯೆ ಕೆನಡಾದಲ್ಲೇ ನಡೆಯಲಿದೆ. ನಮ್ಮ ಎಲ್ಲ ಕುಟುಂಬ ಸದಸ್ಯರು ಇಲ್ಲೇ ಇದ್ದೇವೆ’’ ಎಂದು ಅವರ ಪುತ್ರ ಸರ್ಫರಾಝ್ ಇಂದು ತಿಳಿಸಿದ್ದಾರೆ.

ಕಾಬೂಲ್‌ನಲ್ಲಿ ಜನಿಸಿರುವ ಖಾದರ್ 1973ರಲ್ಲಿ ರಾಜೇಶ್ ಖನ್ನಾ ಅಭಿನಯದ ‘ದಾಗ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ್ದರು. ಈತನಕ ಅವರು 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. 250ಕ್ಕೂ ಅಧಿಕ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ನಟನಾಗುವ ಮೊದಲು ಅವರು ರಣದೀರ್ ಕಪೂರ್-ಜಯ ಬಚ್ಚನ್ ನಟನೆಯ 'ಜವಾನಿ ದಿವಾನಿ' ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News