×
Ad

ಮಾದಕ ವಸ್ತು ಮಾರಾಟ, ಮಾರಾಕಾಸ್ತ್ರಗಳನ್ನಿಟ್ಟುಕೊಂಡ ಆರೋಪ: ಐವರ ಸೆರೆ

Update: 2019-01-02 21:45 IST

ಬೆಂಗಳೂರು, ಜ.2: ಮಾದಕ ವಸ್ತು ಮಾರಾಟ ಹಾಗೂ ಮಾರಾಕಾಸ್ತ್ರಗಳನ್ನಿಟ್ಟುಕೊಂಡಿದ್ದ ಆರೋಪದಡಿ ಐವರನ್ನು ಬಂಧಿಸಿ, 2 ಗ್ರಾಂ ಕೊಕೇನ್, ಕಾರು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಕುಮಾರಸ್ವಾಮಿ ನಾಯ್ಡು ರಸ್ತೆಯ ಬಳಿ ಯುವಕನೋರ್ವ ಮಾದಕ ವಸ್ತು ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಈ ದಂಧೆಯಲ್ಲಿ ತೊಡಗಿದ್ದ ಗುಲ್ರಾಝ್(32) ಎಂಬಾತನನ್ನು ಬಂಧಿಸಿ, ಕೋಕೆನ್, ಮೊಬೈಲ್ ಹಾಗೂ ಕಾರು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಅದೇ ರೀತಿ, ಫ್ರೇಜರ್ ಟೌನ್‌ನ ರೈಲ್ವೆ ತಡೆಗೋಡೆಗೆ ಹೊಂದಿಕೊಂಡಿರುವ ರಸ್ತೆಯೊಂದರಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಕೃತ್ಯವೆಸಗಲು ಮುಂದಾಗಿದ್ದ ಆರೋಪದಡಿ ಮಝರ್ ಅಹ್ಮದ್, ರೆಯಾನ್, ಹಖೀಬ್ ಹಾಗೂ ಝಾಕಿ ಎಂಬಾತನನ್ನು ಬಂಧಿಸಿ ವಿಚಾರಣೆ ಮುಂದುವರೆಸಲಾಗಿದೆ ಎಂದು ಸಿಸಿಬಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News