4ನೇ ಟೆಸ್ಟ್: ಉತ್ತಮ ಆರಂಭದ ಬಳಿಕ ಕುಸಿದ ಆಸೀಸ್‌ಗೆ ಫಾಲೋ ಆನ್ ಭೀತಿ

Update: 2019-01-05 03:34 GMT

ಸಿಡ್ನಿ, ಜ. 5: ಗಾವಸ್ಕರ್- ಬಾರ್ಡರ್ ಸರಣಿಯಲ್ಲಿ 1-2 ಹಿನ್ನಡೆಯಲ್ಲಿರುವ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧದ ಕೊನೆಯ ಟೆಸ್ಟ್‌ನಲ್ಲಿ ಉತ್ತಮ ಆರಂಭದ ಬಳಿಕ ದಿಢೀರ್ ಕುಸಿತ ಕಂಡು, ಫಾಲೋ ಆನ್ ಭೀತಿಗೆ ಸಿಲುಕಿದೆ.

ಭಾರತದ ಭಾರಿ ಮೊತ್ತವನ್ನು ಬೆನ್ನಟ್ಟಿದ ಅತಿಥೇಯ ತಂಡ ಮೊದಲ ವಿಕೆಟ್‌ಗೆ 72 ರನ್ ಸೇರಿಸಿತು. ಅಗ ಭರವಸೆಯ ಸ್ಪಿನ್ನರ್ ಕುಲದೀಪ್ ಯಾದವ್ ಉಸ್ಮಾನ್ ಖ್ವಾಜಾ (27) ಅವರನ್ನು ಔಟ್ ಮಾಡಿ ಭಾರತಕ್ಕೆ ಮೊದಲ ವಿಕೆಟ್ ದೊರಕಿಸಿಕೊಟ್ಟರು.

ನಾಲ್ಕನೇ ಟೆಸ್ಟ್‌ಗೆ ತಂಡದಲ್ಲಿ ಸ್ಥಾನ ಪಡೆದ ಮರ್ನಸ್ ಲಬುಶೆಗ್, ಮತ್ತೊಬ್ಬ ಆರಂಭಿಕ ಆಟಗಾರ ಮಾರ್ಕ್ಯೂಸ್ ಹ್ಯಾರಿಸ್ ಜತೆ ಎರಡನೇ ವಿಕೆಟ್‌ಗೆ 56 ರನ್ ಸೇರಿಸಿದರು. ಭೋಜನ ವಿರಾಮ ವೇಳೆಗೆ ಆಸ್ಟ್ರೇಲಿಯಾ 1 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಆದರೆ ಭೋಜನ ವಿರಾಮ ಬಳಿಕ ರವೀಂದ್ರ ಜಡೇಜಾ (38ಕ್ಕೆ 2), ಹ್ಯಾರಿಸ್ (79) ಹಾಗೂ ಶಾನ್ ಮಾರ್ಷ್ (8) ಅವರ ವಿಕೆಟ್ ಪಡೆದು ಭಾರತಕ್ಕೆ ಮೇಲುಗೈ ಒದಗಿಸಿದರು. ಉತ್ತಮವಾಗಿ ಆಡುತ್ತಿದ್ದ ಮರ್ನಸ್ (38) ಅವರಿಗೆ ಮೊಹ್ಮದ್ ಶಮಿ ಪೆವಿಲಿಯನ್ ಹಾದಿ ತೋರಿಸಿದರು.

ಇತ್ತೀಚಿನ ವರದಿಗಳು ಬಂದಾಗ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿದ್ದು, ಫಾಲೋ ಆನ್ ಭೀತಿ ಎದುರಿಸುತ್ತಿದೆ. ಫಾಲೋ ಆನ್‌ನಿಂದ ಪಾರಾಗಲು ಆಸ್ಟ್ರೇಲಿಯಾ 268 ರನ್ ಗಳಿಸಬೇಕಿದೆ. ಟ್ರಾವಿಸ್ ಹೆಡ್ ಹಾಗೂ ಪೀಟರ್ ಹ್ಯಾಂಡ್ಸ್‌ಕೂಂಬ್ ಕ್ರೀಸ್‌ನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News