ಭಾರತಕ್ಕೆ ಆಸಿಸ್ ನೆಲದಲ್ಲಿ ಐತಿಹಾಸಿಕ ಸರಣಿ ಜಯ

Update: 2019-01-07 06:11 GMT

ಸಿಡ್ನಿ, ಜ. 7: ಮಳೆಯಿಂದ ತೀವ್ರ ತೊಂದರೆಗೀಡಾದ ಅಂತಿಮ ಹಾಗು 4ನೆ ಟೆಸ್ಟ್ ಪಂದ್ಯ ಡ್ರಾ ಆಗುವುದರೊಂದಿಗೆ ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಸರಣಿ ಜಯಗಳಿಸಿದೆ.

1947ರಿಂದ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಕ್ಕೆ ಪ್ರವಾಸ ಹೋಗುತ್ತಿದ್ದು, ಇದೇ ಮೊದಲ ಬಾರಿಗೆ ಅಲ್ಲಿ ಸರಣಿ ಜಯ ಪಡೆದಿದೆ. ಆಸ್ಟ್ರೇಲಿಯವನ್ನು ಅದರ ನೆಲದಲ್ಲೇ ವಿರಾಟ್ ಕೊಹ್ಲಿ ನೇತೃತ್ವದ ತಂಡ 2 -1 ಅಂತರದಿಂದ ಸೋಲಿಸಿ ಗಾವಸ್ಕರ್- ಬಾರ್ಡರ್ ಟ್ರೋಫಿಯನ್ನು ಗೆದ್ದಿದೆ.

ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿದ ಚೇತೇಶ್ವರ ಪೂಜಾರ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ಕೊನೆಯ ದಿನ ಒಂದು ಎಸೆತದ ಆಟ ಕೂಡಾ ಸಾಧ್ಯವಾಗಲಿಲ್ಲ. ಕನಿಷ್ಠ ಈ ಪಂದ್ಯದಲ್ಲಿ ಡ್ರಾ ಸಾಧಿಸಲು ದಿನವಿಡೀ ಬ್ಯಾಟಿಂಗ್ ಮಾಡಬೇಕಾದ ಒತ್ತಡಕ್ಕೆ ಸಿಲುಕಿದ್ದ ಅತಿಥೇಯ ತಂಡ ತೀವ್ರ ಮಳೆಯಿಂದಾಗಿ ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು.

ಅಡಿಲೇಡ್ ಟೆಸ್ಟ್ ಪಂದ್ಯವನ್ನು 31 ರನ್‌ಗಳ ಅಂತರದಿಂದ ಗೆದ್ದಿದ್ದ ಭಾರತ ತಂಡ, ಮೂರನೇ ಟೆಸ್ಟ್ ಪಂದ್ಯವನ್ನು ಮೆಲ್ಬೋರ್ನ್‌ನಲ್ಲಿ 137 ರನ್‌ಗಳ ಅಂತರದಿಂದ ಜಯಿಸಿ ಗಾವಸ್ಕರ್ - ಬಾರ್ಡರ್ ಟ್ರೋಫಿ ಉಳಿಸಿಕೊಂಡಿತು. ಆಸ್ಟ್ರೇಲಿಯಾ ಪರ್ತ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು 146 ರನ್ ಅಂತರದಿಂದ ಗೆದ್ದುಕೊಂಡು ವೈಟ್‌ವಾಶ್‌ನಿಂದ ಪಾರಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News