ಪ್ರವೇಶಾತಿಗೆ ಮಾತ್ರವೇ ಮಾನ್ಯತೆ...?

Update: 2019-01-07 18:32 GMT

ಮಾನ್ಯರೇ,

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ(ಕೆ.ಎಸ್.ಒ.ಯು.)ಕ್ಕೆ 2018-19ರ ಸಾಲಿಗೆ ಯುಜಿಸಿ ಯಿಂದ ಮಾನ್ಯತೆ ಸಿಕ್ಕಿದೆ. ಆದರೆ 2012ರಿಂದ 16ರಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಯುಜಿಸಿಯ ಈ ತೀರ್ಮಾನ 95 ಸಾವಿರ ವಿದ್ಯಾರ್ಥಿಗಳನ್ನು ಬೀದಿಪಾಲು ಮಾಡಿದೆ. ಪದವಿಯ ಎರಡು ವರ್ಷದ ಪೂರ್ತಿ ಮಾಡಿದವರು, ಮೂರನೇ ವರ್ಷ ಮುಗಿಸುವಲ್ಲಿ ವಂಚಿತರಾಗಿದ್ದಾರೆ. ಇದನ್ನು ಪರಿಗಣಿಸದೆ ಪ್ರವೇಶಾತಿಗೆ ಮಾತ್ರ ಮಾನ್ಯತೆ ಕೊಟ್ಟಿರುವ ಯು.ಜಿ.ಸಿ.ಯ ತೀರ್ಮಾನವು ಶೋಚನೀಯವಾಗಿದೆ. ಪ್ರವೇಶಾತಿಗೆ ಮಾನ್ಯತೆ ಸಿಕ್ಕಿದೆಯೆಂದು ವಿಶ್ವವಿದ್ಯಾನಿಲಯದ ಎಲ್ಲಾ ಸಿಬ್ಬಂದಿ ಸಂಭ್ರಮಿಸುವಾಗ 95 ಸಾವಿರ ವಿದ್ಯಾರ್ಥಿಗಳು ದುಗುಡಲ್ಲಿದ್ದಾರೆಂಬುದು ಅರಿತುಕೊಳ್ಳಬೇಕಾಗಿದೆ. ಕಳೆದ ವರ್ಷ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳಲ್ಲಿ ಕೆ.ಎಸ್.ಒ.ಯು.ನ ಮಾನ್ಯತೆ ವಿಷಯವೂ ಒಳಗೊಂಡಿತ್ತು. ಅದು ವಿಶ್ವ ವಿದ್ಯಾನಿಲಯಕ್ಕೆ ಪ್ರವೇಶಾತಿ ಮಾನ್ಯತೆ ಸಿಗುವಲ್ಲಿ ಮಾತ್ರ ಯಶಸ್ವಿಯಾಗಿದೆ ಎಂದು ಹೇಳಬಹುದು. ಪದವಿ ಪಡೆಯಲು ಒಂದು ವರ್ಷ ಮಾತ್ರ ಬಾಕಿಯಿರುವ ವಿದ್ಯಾರ್ಥಿಗಳ ಬದುಕನ್ನು ಮಣ್ಣುಪಾಲು ಮಾಡಿದೆ.

-ಎಂ. ಎ. ಮುಜೀಬ್ ಅಹ್ಮದ್,

ಕೆ.ಎಸ್.ಒ.ಯು. ವಿದ್ಯಾರ್ಥಿ, ಗುಂಡಿಕೆರೆ, ಕೊಡಗು

Writer - -ಎಂ. ಎ. ಮುಜೀಬ್ ಅಹ್ಮದ್,

contributor

Editor - -ಎಂ. ಎ. ಮುಜೀಬ್ ಅಹ್ಮದ್,

contributor

Similar News