ಹಾರ್ದಿಕ್ ಪಾಂಡ್ಯಾರ 'ನಾಲಗೆ ಸುಟ್ಟ' ಕಾಫಿ ವಿತ್ ಕರಣ್!

Update: 2019-01-09 09:17 GMT

ಸಿಡ್ನಿ, ಜ.9: ‘ಕಾಫಿ ವಿತ್ ಕರಣ್’ ರಿಯಾಲಿಟಿ ಶೋನಲ್ಲಿ ಲಿಂಗ ತಾರತಮ್ಯದ ಹೇಳಿಕೆಗಳ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆ ಭಾರತದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ ಕ್ಷಮೆಯಾಚಿಸಿದ್ದಾರೆ.

‘ಕಾಫಿ ವಿತ್ ಕರಣ್’ ಶೋನಲ್ಲಿ ಕೆ.ಎಲ್. ರಾಹುಲ್ ಜೊತೆಗೆ ಭಾಗವಹಿಸಿದ್ದ ಪಾಂಡ್ಯಾ ನೀಡಿದ ಕೆಲವು ಹೇಳಿಕೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಪಾಂಡ್ಯಾ,”ಕಾಫಿ ವಿತ್ ಕರಣ್ ನಲ್ಲಿ ನನ್ನ ಮಾತುಗಳ ಬಗ್ಗೆ ಪ್ರತಿಯೊಬ್ಬರಲ್ಲೂ ಕ್ಷಮೆ ಯಾಚಿಸುತ್ತೇನೆ” ಎಂದು ಹೇಳಿದ್ದಾರೆ.

ಹಲವು ಮಹಿಳೆಯರ ಜೊತೆ ಇರುವ ಬಗ್ಗೆ ಹಾಗು ಪೋಷಕರ ಬಗ್ಗೆ ಮುಕ್ತವಾಗಿ ಇರುವ ಬಗ್ಗೆ ಪಾಂಡ್ಯಾ ಹೇಳಿಕೆ ನೀಡಿದ್ದರು. ಕ್ಲಬ್ ಗಳಲ್ಲಿರುವ ಮಹಿಳೆಯರ ಹೆಸರುಗಳನ್ನೇಕೆ ನೀವು ಕೇಳುವುದಿಲ್ಲ ಎಂದು ಕರಣ್ ಪ್ರಶ್ನಿಸಿದಾಗ, “ಅವರ ಮೂವ್ ಗಳನ್ನು ನೋಡಲು ನಾನು ಇಷ್ಟಪಡುತ್ತೇನೆ” ಎಂದು ಪಾಂಡ್ಯಾ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News