×
Ad

ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ನೀಡುವ ಯೋಜನೆ ಅಗತ್ಯ: ಶ್ರೀ ರವಿಶಂಕರ್ ಗುರೂಜಿ

Update: 2019-01-10 19:33 IST

ಬೆಂಗಳೂರು, ಜ. 10: ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ನೀಡುವ ಮತ್ತು ಎಲ್ಲರಿಗೂ ಪೌಷ್ಟಿಕ ಆಹಾರ ಒದಗಿಸುವ ಯೋಜನೆಗಳನ್ನು ರೂಪಿಸಬೇಕು. ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ಶ್ರೀರವಿಶಂಕರ್ ಗುರೂಜಿ ಸಲಹೆ ಮಾಡಿದ್ದಾರೆ.

ಗುರುವಾರ ನಗರದ ಅರಮನೆ ಮೈದಾನದಲ್ಲಿ ಏರ್ಪಡಿಸಿರುವ ಆಲ್ ಇಂಡಿಯಾ ಕಾಂಗ್ರೆಸ್ ಆಫ್ ಒಬೆಸ್ಟೆಟ್ರಿಕ್ಸ್ ಆ್ಯಂಡ್ ಗೈನಕಾಲಜಿಯ (ಎಐಸಿಒಜಿ) 62ನೆ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಪುರಾತನ ವೈದ್ಯಕೀಯ ಪದ್ಧತಿಗಳನ್ನೂ ಅಧ್ಯಯನ ಮಾಡಬೇಕು ಎಂದು ಸೂಚಿಸಿದರು.

ಯಾವುದೇ ವೈದ್ಯಕೀಯ ಪದ್ಧತಿ ಇರಲಿ, ಜತೆಗೆ ಆಯುರ್ವೇದ, ಯೋಗ ಪದ್ಧತಿಗಳ ಅಂಶಗಳನ್ನು ಸೇರಿಸಿಕೊಂಡು ಸಮಗ್ರ ಪದ್ಧತಿಯಲ್ಲಿ ಆರೈಕೆ ಮಾಡಬೇಕು. ಪ್ರಸೂತಿಪೂರ್ವ ಹಾಗೂ ನಂತರದಲ್ಲಿ ಹೆಣ್ಣಿನ ಮಾನಸಿಕ ಆರೋಗ್ಯ ಕಾಪಾಡುವುದು ಬಹಳ ಮುಖ್ಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News