×
Ad

ನಾನು ಹಲ್ಲು ಕಚ್ಚಿ ಸರಕಾರ ನಡೆಸುತ್ತಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದರೇ ?: ಇಲ್ಲಿದೆ ಉತ್ತರ

Update: 2019-01-10 19:51 IST

ಬೆಂಗಳೂರು, ಜ.10: ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾನು ಹಲ್ಲು ಕಚ್ಚಿ ಸರಕಾರ ನಡೆಸುತ್ತಿದ್ದೇನೆ ಎಂದು ಹೇಳಿರುವುದಾಗಿ, ಮಾಧ್ಯಮಗಳಲ್ಲಿ ಬಂದಿರುವ ಕಪೋಲಕಲ್ಪಿತ ಸುದ್ದಿಗಳಿಗೆಲ್ಲ ನಾನು ಯಾಕೆ ಪ್ರತಿಕ್ರಿಯೆ ನೀಡಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಗುರುವಾರ ನಗರದಲ್ಲಿ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಸಿರುಗಟ್ಟಿದ ವಾತಾವರಣ, ಹಲ್ಲು ಕಚ್ಚಿ ಸರಕಾರ ನಡೆಸುತ್ತಿದ್ದೇನೆ ಅನ್ನೋದೆಲ್ಲ ಆಧಾರ ರಹಿತವಾದ ಸುದ್ದಿಗಳು ಎಂದರು.

ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಡೆದ ಚರ್ಚೆಯೇ ಬೇರೆ. ಮಾಧ್ಯಮಗಳಲ್ಲಿ ಈ ಸಂಬಂಧ ಬಂದಿರುವ ಸುದ್ದಿಗಳೇ ಬೇರೆ. ಆದುದರಿಂದ, ಕಪೋಲಕಲ್ಪಿತ ಸುದ್ದಿಗಳಿಗೆಲ್ಲ ಯಾಕೆ ಪ್ರತಿಕ್ರಿಯಿಸಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News