ಯಾತ್ರಿಗಳಿಗೆ ಲಾಟರಿ ಮೂಲಕ ಸಹಾಯಧನಕ್ಕೆ ಆಯ್ಕೆ

Update: 2019-01-11 17:04 GMT

ಬೆಂಗಳೂರ,ಜ.11: 2018-19ನೆ ಸಾಲಿನಲ್ಲಿ ಕರ್ನಾಟಕ ರಾಜ್ಯದಿಂದ ಕೈಲಾಸ ಮಾನಸ ಸರೋವರ ಮತ್ತು ಚಾರ್‌ಧಾಮ್ ಯಾತ್ರೆ ಪೂರೆೈಸಿ ಸಹಾಯ ಧನಕ್ಕೆ ಅರ್ಜಿ ಸಲ್ಲಿಸಿದವರನ್ನು ಲಾಟರಿ ಮೂಲಕ ಫಲಾನುಭಗಳನ್ನು ಆಯ್ಕೆ ಮಾಡಲಾಗುವುದು.

ಚಾರ್‌ಧಾಮ್ ಯಾತ್ರೆಗೆ 1,730 ಫಲಾನುಭಗಳನ್ನು, ಮಾನಸ ಸರೋವರ ಯಾತ್ರೆಗೆ 1000 ಫಲಾನುಭಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲು ಹಿರಿಯ ಅಧಿಕಾರಿಗಳನ್ನೊಳಗೊಂಡಂತೆ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಜ.16 ಮತ್ತು 17 ರಂದು ಬೆಳಗ್ಗೆ 9-30ಕ್ಕೆ ಬೆಂಗಳೂರು ಚಾಮರಾಜಪೇಟೆಯಲ್ಲಿರುವ ರಾಯ ರಾಯ ಛತ್ರದ ಆವರಣದಲ್ಲಿ ಪಾರದರ್ಶಕವಾಗಿ ವಿಡಿಯೋ ಚಿತ್ರೀಕರಣದೊಂದಿಗೆ ಲಾಟರಿ ಪ್ರಕ್ರಿಯೆ ನಡೆಸಲಿದೆ.

ಸಹಾಯಧನ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿರುವ ಇಚ್ಛೆವುಳ್ಳ ಯಾತ್ರಾರ್ಥಿಗಳು ಬಹಿರಂಗವಾಗಿ ನಡೆಸಲಿರುವ ಲಾಟರಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯಕ್ತರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

      

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News