‘ಅಂಗಾಂಗ ದಾನದ ಬಗೆಗಿನ ತಪ್ಪು ಕಲ್ಪನೆ ಹೋಗಲಾಡಿಸಬೇಕು’

Update: 2019-01-11 17:15 GMT

ಬೆಂಗಳೂರು, ಜ. 11: ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ಅಂಗಾಂಗ ದಾನ ಮಾಡುವ ವಾಗ್ದಾನವನ್ನು ವಿಶೇಷವಾಗಿ ಯುವಜನರಿಂದು ಕೈಗೊಳ್ಳಬೇಕಿದೆ. ಅಂಗಾಂಗ ದಾನದ ಬಗೆಗಿನ ತಪ್ಪುಕಲ್ಪನೆ ನಿರ್ಮೂಲನೆಯಾಗಬೇಕಿದೆ ಎಂದು ‘ಜೀವಸಾರ್ಥಕತೆ’ ಸಂಚಾಲಕ ಡಾ.ಕಿಶೋರ್ ಫಡ್ಕೆ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಏರ್ಪಡಿಸಿದ್ದ ಅಂಗಾಂಗ ದಾನದ ಅಭಿಯಾನ ಹಾಗೂ ಅಂಗಾಂಗ ದಾನದ ಮೂಲಕ ಹಲವು ಮಂದಿ ಜೀವನ ಉಳಿಸಿದವರ ಕುಟುಂಬದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿಇಓ ಶೈಲಜಾ ಸುರೇಶ್, ಅಂಗಾಂಗ ಕಸಿಗಾಗಿ ಕಾಯುತ್ತಿರುವ ಜನರಿಗೆ ಅಂಗಾಂಗ ದಾನ ಮಾಡುವ ಮೂಲಕ ಅವರ ಜೀವ ಉಳಿಸುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಆಯೋಜಿಸಲಾಗಿದೆ. ಅಲ್ಲದೆ, ಇದರ ಮೂಲಕ ಜನರಿಗೆ ಅಂಗಾಂಗ ದಾನದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು. ಈ ವೇಳೆ ಮಹರ್ಷಿ ಆನಂದ್ ಗುರೂಜಿ, ನಟಿ ಅಮೂಲ್ಯ, ಡಿಸಿಪಿ ಸೌಮ್ಯಲತಾ ಹಾಗೂ ಡಾ.ಕಿಶೋರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News