ಭಾರತ- ಆಸೀಸ್ ಏಕದಿನ ಪಂದ್ಯ: ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಆತಿಥೇಯ ತಂಡ

Update: 2019-01-12 03:39 GMT

ಸಿಡ್ನಿ, ಜ.12: ಟೆಸ್ಟ್ ಸರಣಿ ಸೋತ ಒತ್ತಡದಲ್ಲಿರುವ ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲೂ ಮೇಲುಗೈ ಸಾಧಿಸುವ ಹುಮ್ಮಸ್ಸಿನಲ್ಲಿರುವ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯರಿಗೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಒತ್ತಡದಿಂದ  ಆಸಿಸ್ ನಿಧನವಾಗಿ ಚೇತರಿಸಿಕೊಳ್ಳುತ್ತಿದೆ.

ಆಸ್ಟ್ರೇಲಿಯಾದ ಅಪಾಯಕಾರಿ ದಾಂಡಿಗ ಅರೊನ್ ಫಿಂಚ್ (6) ಅವರನ್ನು ಭಾರತದ ವೇಗಿ ಭುವನೇಶ್ವರ್ ಕುಮಾರ್ ಬಲಿ ಪಡೆದಿದ್ದಾರೆ. ಆಗ ತಂಡದ ಸ್ಕೋರ್ ಕೇವಲ 8 ಆಗಿತ್ತು. ತಂಡದ ಮೊತ್ತ 41 ಆಗುವಷ್ಟರಲ್ಲಿ ಎರಡನೇ ವಿಕೆಟ್ ರೂಪದಲ್ಲಿ ಅಲೆಕ್ಸ್ ಕೆರಿ (24) ಔಟ್ ಆದರು. ಇತ್ತೀಚಿನ ವರದಿ ಬಂದಾಗ ಉಸ್ಮಾನ್ ಖ್ವಾಜಾ (26) ಮತ್ತು ಶಾನ್ ಮಾರ್ಶ್ (14) ರನ್ ಗಳಿಸಿ ಆಟವಾಡುತ್ತಿದ್ದಾರೆ. ಆಸ್ಟ್ರೇಲಿಯಾ 18 ಓವರ್‌ಗಳಲ್ಲಿ 2 ವಿಕೆಟ್‌ಗೆ 78 ರನ್ ಗಳಿಸಿ ಆಟ ಮೂಂದುವರಿಸಿದೆ.

ಫಿಂಚ್ ವಿಕೆಟ್ ಪಡೆಯುವ ಮೂಲಕ ಭುವನೇಶ್ವರ ಕುಮಾರ್ ಏಕದಿನ ಪಂದ್ಯದಲ್ಲಿ 100ನೇ ವಿಕೆಟ್ ಕಬಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News