ಪ್ರಥಮ ಏಕದಿನ ಪಂದ್ಯ : ಭಾರತದ ಗೆಲುವಿಗೆ 289 ರನ್ ಗಳ ಸವಾಲು

Update: 2019-01-12 06:24 GMT

ಸಿಡ್ನಿ, ಜ.12: ಇಲ್ಲಿ ಆರಂಭಗೊಂಡ ಮೂರು ಏಕದಿನ ಅಂತರ್ ರಾಷ್ಟ್ರೀಯ ಪಂದ್ಯಗಳ ಸರಣಿಯ  ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಆತಿಥೇಯ ಆಸ್ಟ್ರೇಲಿಯ  ನಿಗದಿತ 50  ಓವರ್ ಗಳಲ್ಲಿ  5 ವಿಕೆಟ್ ನಷ್ಟದಲ್ಲಿ  288 ರನ್ ಗಳಿಸಿದೆ.

ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯ ತಂಡ ಆರಂಭಿಕ ದಾಂಡಿಗರಾದ  ನಾಯಕ  ಆ್ಯರೊನ್ ಫಿಂಚ್ (6) ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ (24) ಅವರನ್ನು ಕಳೆದುಕೊಂಡರೂ ಬಳಿಕ ಚೇತರಿಸಿಕೊಂಡಿತು. ಪೀಟರ್ ಹ್ಯಾಂಡ್ಸ್ ಕ್ಯಾಂಬ್ (73) ಉಸ್ಮಾನ್ ಖ್ವಾಜಾ(59) , ಶಾನ್ ಮಾರ್ಷ್ (54)  ಅರ್ಧಶತಕಗಳ ನೆರವಿನಲ್ಲಿ ಆಸ್ಟ್ರೇಲಿಯ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.

ಮಾರ್ಕೊ ಸ್ಟೋನಿಸ್ (ಔಟಾಗದೆ47  ) ಮತ್ತು ಗ್ಲನ್ ಮ್ಯಾಕ್ಸ್ ವೆಲ್ (ಔಟಾಗದೆ 11) ಉಪಯುಕ್ತ ಕೊಡುಗೆ ನೀಡಿದರು.

ಭಾರತದ ಭುವನೇಶ್ವರ್ ಕುಮಾರ್ ಮತ್ತು ಕುಲ್ ದೀಪ್ ಯಾದವ್ ತಲಾ 2 ವಿಕೆಟ್ ಮತ್ತು ರವೀಂದ್ರ ಜಡೇಜ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News