×
Ad

ನಾಪತ್ತೆಯಾದ ಮೀನುಗಾರರ ಹುಡುಕಾಟ ಮುಂದುವರಿಕೆ: ಗೃಹ ಸಚಿವ ಎಂ.ಬಿ.ಪಾಟೀಲ್

Update: 2019-01-12 19:42 IST

ಬೆಂಗಳೂರು, ಜ.12: ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾಗಿರುವ ಮೀನುಗಾರರ ಸುಳಿವು ದೊರೆತಿಲ್ಲ. ಆದರೆ, ಅವರ ಹುಡುಕಾಟವನ್ನು ಮುಂದುವರೆಸಲಾಗಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀನುಗಾರರ ಪತ್ತೆಗೆ ಸರಕಾರ ತೀವ್ರ ಪ್ರಯತ್ನ ನಡೆಸಿದೆ. ಮಹಾರಾಷ್ಟ್ರ ಹಾಗೂ ಗೋವಾ ಸರಕಾರಗಳಿಗೆ ಮಾನವೀಯತೆ ಹಿನ್ನೆಲೆಯಲ್ಲಿ ಸಹಕಾರ ಕೋರಿ ಪತ್ರ ಬರೆಯಲಾಗುತ್ತಿದೆ ಎಂದರು.

ಮಾಧ್ಯಮಗಳಲ್ಲಿ ಮೀನುಗಾರರ ಸುಳಿವು ದೊರೆತಿದೆ ಎಂದು ಮಾಡಿರುವ ವರದಿ ಆಧಾರರಹಿತ ಎಂದು ಸ್ಪಷ್ಟಪಡಿಸಿದ ಅವರು, ಇಸ್ರೋ ನೆರವು ಪಡೆಯಲು ನಿರ್ಧರಿಸಿ, ಸಂಸ್ಥೆಗೂ ಪತ್ರೆ ಬರಯುತ್ತಿದ್ದೇವೆ ಎಂದು ತಿಳಿಸಿದರು.

ಮೀನುಗಾರರ ಕುಟುಂಬ ಆತಂಕದಲ್ಲಿದೆ. ಕೇರಳದ ಕೊಚ್ಚಿಯಲ್ಲೂ ಹುಡುಕಾಟ ನಡೆಸಲಾಗಿದೆ. ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪಾಟೀಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News