×
Ad

ಹಣಕಾಸಿನ ವಿಚಾರಕ್ಕೆ ಗೆಳತಿ ಮೇಲೆ ಆ್ಯಸಿಡ್ ದಾಳಿ: ಯುವತಿಯ ಬಂಧನ

Update: 2019-01-12 21:37 IST

ಬೆಂಗಳೂರು, ಜ.12: ಹಣಕಾಸಿನ ವಿಚಾರಕ್ಕೆ ಸ್ನೇಹಿತೆಯಿಂದಲೇ ಗೆಳತಿ ಮೇಲೆ ಆ್ಯಸಿಡ್ ದಾಳಿ ನಡೆದಿರುವ ಆರೋಪ ಇಲ್ಲಿನ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಳಿಬಂದಿದೆ.

ಈ ಸಂಬಂಧ ಆರೋಪಿ ರೂಪಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಜೂ.6ರಂದು ಹನುಮಂತನಗರದ ಶ್ರೀನಿವಾಸ ನಗರದಲ್ಲಿ ಶುಭಾ ಎಂಬವರ ಮೇಲೆ ರೂಪಾ ಆ್ಯಸಿಡ್ ದಾಳಿ ನಡೆಸಿದ್ದರು. ಸುಮಾರು ಏಳು ವರ್ಷದಿಂದ ಶುಭಾ ಹಾಗೂ ಆರೋಪಿ ರೂಪಾ ಒಳ್ಳೆಯ ಸ್ನೇಹಿತರಾಗಿ ಒಂದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಇಬ್ಬರ ನಡುವೆ ಕೇವಲ 10 ಸಾವಿರ ಹಣದ ವಿಚಾರವಾಗಿ ಇತ್ತೀಚೆಗೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಬಳಿಕ ಮಲಗಿದ್ದ ಶುಭಾ ಮೈಮೇಲೆ ರೂಪಾ ಆ್ಯಸಿಡ್ ಎರಚಿದ್ದಳು. ಈ ಕುರಿತು ಹನುಮಂತನಗರ ಠಾಣೆಯಲ್ಲಿ ಶುಭಾ ಸ್ನೇಹಿತ ಶಶಿಕುಮಾರ್ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

ಗಾಯಾಳು ಶುಭಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದು, ಆರೋಪಿ ರೂಪಾಳನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News