ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಎಲ್.ರಘು ಆಸ್ತಿ ಜಪ್ತಿ: ಜಾರಿ ನಿರ್ದೇಶನಾಲಯ

Update: 2019-01-12 16:32 GMT

ಬೆಂಗಳೂರು, ಜ.12: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಎಲ್. ರಘು ಅವರಿಗೆ ಸೇರಿದ 11 ವಿವಿಧ ಆಸ್ತಿಗಳನ್ನ ಜಾರಿ ನಿರ್ದೇಶನಾಲಯ(ಇಡಿ) ಜಪ್ತಿ ಮಾಡಿದೆ ಎನ್ನಲಾಗಿದೆ.

ಇಂಜಿನಿಯರ್ ರಘು ಅವರಿಗೆ ಸೇರಿದ ಮಂಡ್ಯ ಹಾಗೂ ಬೆಂಗಳೂರಿನಲ್ಲಿರುವ ಒಟ್ಟು 1.92 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನ ಜಪ್ತಿ ಮಾಡಲಾಗಿದೆ ಎಂದು ಇಡಿ ಟ್ವಿಟ್ ಮಾಡಿದೆ.

ಈ ಹಿಂದೆ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ರಘು ಅವರ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು 2012 ರಲ್ಲಿ ದಾಳಿ ನಡೆಸಿದ್ದರು. ರಘು ಅವರು ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ದುಬಾರಿ ಕೈಗಡಿಯಾರ ಉಡುಗೊರೆ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News