ರಾಹುಲ್, ಪಾಂಡ್ಯ ಬದಲು ಈ ಇಬ್ಬರು ಯುವ ಕ್ರಿಕೆಟಿಗರಿಗೆ ಲಕ್

Update: 2019-01-13 04:18 GMT
ಶುಭ್‌ಮನ್ ಗಿಲ್ - ವಿಜಯಶಂಕರ್

ಹೊಸದಿಲ್ಲಿ, ಜ. 13: ಮಹಿಳೆಯರ ಬಗ್ಗೆ ಅಸಭ್ಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಅವರನ್ನು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಪ್ರವಾಸದಿಂದ ವಾಪಾಸು ಕರೆಸಿಕೊಂಡ ಹಿನ್ನೆಲೆಯಲ್ಲಿ ಯುವ ಕ್ರಿಕೆಟಿಗರಾದ ಶುಭ್‌ಮನ್ ಗಿಲ್ ಹಾಗೂ ವಿಜಯಶಂಕರ್ ಅವರಿಗೆ ಅದೃಷ್ಟ ಖುಲಾಯಿಸಿದೆ.

ಈ ಇಬ್ಬರು ಶೀಘ್ರವೇ ಭಾರತ ತಂಡ ಸೇರಿಕೊಳ್ಳುವರು.

ಟಿವಿ ಸೆಲೆಬ್ರಿಟಿ ಶೋನಲ್ಲಿ ವ್ಯಕ್ತಪಡಿಸಿದ್ದಾರೆ ಎನ್ನಲಾದ ಆಕ್ಷೇಪಾರ್ಹ ಅಭಿಪ್ರಾಯಗಳ ಬಗ್ಗೆ ತನಿಖೆಯನ್ನು ಬಾಕಿ ಉಳಿಸಿ, ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದ ದಿನ ರಾಹುಲ್ ಹಾಗೂ ಪಾಂಡ್ಯ ಅವರನ್ನು ಭಾರತ ತಂಡದಿಂದ ಕಿತ್ತುಹಾಕಲಾಗಿತ್ತು.

ಮಂಗಳವಾರ ನಡೆಯುವ ಎರಡನೇ ಏಕದಿನ ಪಂದ್ಯಕ್ಕೆ ಮುನ್ನ ವಿಜಯಶಂಕರ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ. "ಇವರು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಹಾಗೂ ನ್ಯೂಝಿಲ್ಯಾಂಡ್ ಪ್ರವಾಸದಲ್ಲಿ ಭಾರತ ತಂಡದಲ್ಲಿರುತ್ತಾರೆ. ಗಿಲ್ ಅವರನ್ನು ನ್ಯೂಝಿಲ್ಯಾಂಡ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ಆಯ್ಕೆ ಮಾಡಲಾಗಿದೆ" ಎಂದು ಬಿಸಿಸಿಐ ಪ್ರಕಟಿಸಿದೆ.

ಆಕ್ಷೇಪಾರ್ಹ ಹೇಳಿಕೆಗಳ ಬಗ್ಗೆ ಇಬ್ಬರೂ ಆಟಗಾರರು ಕ್ಷಮೆ ಯಾಚಿಸಿದ್ದರೂ, ದುರ್ನಡತೆ ಮತ್ತು ಅಶಿಸ್ತು ಆರೋಪದಲ್ಲಿ ತನಿಖೆ ಬಾಕಿ ಇಟ್ಟು, ಯಾವುದೇ ಬಗೆಯ ಕ್ರಿಕೆಟ್ ಆಟದಂತೆ ಅಮಾನತುಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News