ಅಂಬಟಿ ರಾಯುಡು ಬೌಲಿಂಗ್ ಶೈಲಿ ಬಗ್ಗೆ ಅಂಪೈರ್‌ಗೆ ಅನುಮಾನ

Update: 2019-01-13 13:35 GMT

ಸಿಡ್ನಿ, ಜ.13: ಭಾರತದ ಆಲ್‌ರೌಂಡರ್ ಅಂಬಟಿ ರಾಯುಡು  ಶನಿವಾರ ನಡೆದ ಆಸ್ಟ್ರೇಲಿಯ ವಿರುದ್ಧ ಮೊದಲ ಏಕದಿನ ಪಂದ್ಯದ ವೇಳೆ ಶಂಕಾಸ್ಪದ ಶೈಲಿಯಲ್ಲಿ ಬೌಲಿಂಗ್ ಮಾಡಿದ ಕುರಿತು ಅಂಪೈರ್ ತನ್ನ ವರದಿಯಲ್ಲಿ ತಿಳಿಸಿದ್ದಾರೆ.

ಪಂದ್ಯದ ಅಧಿಕಾರಿಗಳು ವರದಿಯನ್ನು ಟೀಮ್ ಇಂಡಿಯಾದ ಮ್ಯಾನೇಜ್‌ಮೆಂಟ್‌ಗೆ ನೀಡಿದ್ದಾರೆ. ವರದಿಯಲ್ಲಿ 33ರ ಹರೆಯದ ಆಫ್-ಸ್ಪಿನ್ನರ್ ಬೌಲಿಂಗ್‌ನ ಪರಿಪಕ್ಷತೆ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ ಎಂದು ಐಸಿಸಿ ತಿಳಿಸಿದೆ.

ರಾಯುಡು ಮುಂದಿನ 14 ದಿನಗಳಲ್ಲಿ ಬೌಲಿಂಗ್ ಪರೀಕ್ಷೆಗೆ ಒಳಗಾಗಬೇಕು. ಪರೀಕ್ಷೆಯ ಫಲಿತಾಂಶ ಬರುವ ತನಕ ರಾಯುಡುವಿಗೆ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಆಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಐಸಿಸಿ ತಿಳಿಸಿದೆ.

 ಪಾರ್ಟ್‌ಟೈಮ್ ಬೌಲರ್ ಆಗಿರುವ ರಾಯುಡು ಆಸೀಸ್ ವಿರುದ್ಧ 22ನೇ ಹಾಗೂ 24ನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ್ದು 13 ರನ್ ಬಿಟ್ಟುಕೊಟ್ಟಿದ್ದರು. ಆದರೆ ಒಂದೂ ವಿಕೆಟನ್ನು ಪಡೆದಿರಲಿಲ್ಲ. ರಾಯುಡು ಬೌಲಿಂಗ್ ಶೈಲಿ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್‌ಗೆ ಹೋಲಿಸಲಾಗುತ್ತಿದೆ. ಮುರಳೀಧರನ್ ಸ್ವತಃ ಹಲವು ಬಾರಿ ಶಂಕಾಸ್ಪದ ಬೌಲಿಂಗ್ ಆರೋಪಕ್ಕೆ ಗುರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News