ಕಳವು ಪ್ರಕರಣ: ಇಬ್ಬರ ಸೆರೆ
Update: 2019-01-14 22:10 IST
ಬೆಂಗಳೂರು, ಜ.14: ದರೋಡೆಗೆ ಮನೆಗೆಲಸದ ಮಹಿಳೆಯೇ ಸಂಚು ರೂಪಿಸಿದ್ದ ಆರೋಪ ಪ್ರಕರಣವನ್ನು ಇಲ್ಲಿನ ಆರ್.ಟಿ.ನಗರ ಠಾಣಾ ಪೊಲೀಸರು ಭೇದಿಸಿದ್ದಾರೆ.
ನೇಪಾಳ ಮೂಲದ ಮದನ್ ಮತ್ತು ಗಣೇಶ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆರ್.ಟಿ. ನಗರದ ಆದಿತ್ಯ ನಾರಾಯಣ ಸ್ವಾಮಿ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸುನಿತಾ ಹಾಗೂ ಆಕೆಯ ಪತಿ ಸುರೇಶ್ ಸೇರಿ ಮನೆಯ ಮಾಲಕರನ್ನು ಕಟ್ಟಿ ಹಾಕಿ 6 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ದರೋಡೆ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯ ಪ್ರಕರಣದಲ್ಲಿ ನೇಪಾಳಿ ದಂಪತಿಗೆ ಸಹಾಯ ಮಾಡಿದ ಇಬ್ಬರು ಆರೋಪಿಗಳಾದ ನೇಪಾಳ ಮೂಲದ ಮದನ್ ಮತ್ತು ಗಣೇಶ್ ಎಂಬುವರನ್ನು ಬಂಧಿಸಿ, ಸುನಿತಾ ಹಾಗೂ ಆಕೆಯ ಪತಿಗಾಗಿ ಶೋಧ ನಡೆಸಿದ್ದಾರೆ. ಆರೋಪಿಗಳು ನೇಪಾಳಕ್ಕೆ ತೆರಳಿ ತಲೆಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.