ಹರ್ಯಾಣದ ಅಂಡರ್-17 ಹಾಕಿ ತಂಡಕ್ಕೆ ಬಂಗಾರ

Update: 2019-01-14 18:34 GMT

ಪುಣೆ, ಜ.14: ನೆರೆಯ ರಾಜ್ಯ ಪಂಜಾಬ್ ತಂಡವನ್ನು 1-0 ಗೋಲಿನಿಂದ ಸೋಲಿಸಿದ ಹರ್ಯಾಣ ತಂಡ ಖೇಲೊ ಇಂಡಿಯಾ ಯೂತ್ ಗೇಮ್ಸ್‌ನ ಅಂಡರ್-17 ವಿಭಾಗದ ಹಾಕಿಯಲ್ಲಿ ಬಂಗಾರದ ಪದಕವನ್ನು ಸೋಮವಾರ ಮುಡಿಗೇರಿಸಿಕೊಂಡಿದೆ.

ಮುಂಬೈಯ ಮಹಿಂದ್ರಾ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇತ್ತಂಡಗಳ ನಡುವೆ ಜಿದ್ದಾಜಿದ್ದಿ ಹೋರಾಟ ನಡೆದು ಅಂತಿಮವಾಗಿ ಹರ್ಯಾಣ ಗೆಲುವಿನ ನಗೆ ಬೀರಿತು.

ಪಂದ್ಯದ 40ನೇ ನಿಮಿಷದಲ್ಲಿ ಹರ್ಯಾಣದ ಸಾಹಿಲ್ ಶರ್ಮಾ ಗೆಲುವಿನ ಏಕೈಕ ಗೋಲು ಬಾರಿಸಿದರು.

ಇದಕ್ಕೂ ಮೊದಲು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಒಡಿಶಾ ತಂಡ ಉತ್ತರಪ್ರದೇಶವನ್ನು 3-2 ಗೋಲುಗಳ ಅಂತರದಿಂದ ಸೋಲಿಸಿತು. ಪೂರ್ಣ ಪಂದ್ಯದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಇದರಿಂದ ಪೆನಾಲ್ಟಿಯಲ್ಲಿ ಫಲಿತಾಂಶ ಬಂದಿತು.

ಇದೇ ವಿಭಾಗದ ಬಾಲಕಿಯರ ಲೀಗ್ ಪಂದ್ಯಗಳಲ್ಲ್ಲಿ ಹರ್ಯಾಣ ತಂಡ ಮಹಾರಾಷ್ಟ್ರವನ್ನು 5-0, ಒಡಿಶಾ ತಂಡ ಮಿರೆರಾಂನ್ನು 4-2 ಗೋಲುಗಳ ಅಂತರದಿಂದ ಸೋಲಿಸಿದವು. ಅಂಡರ್-21 ಮಹಿಳಾ ವಿಭಾಗದಲ್ಲಿ ಹರ್ಯಾಣ ತಂಡ, ಉತ್ತರಪ್ರದೇಶವನ್ನು 4-2 ಅಂತರದಿಂದ ಮಣಿಸಿದರೆ ಹಾಗೂ ಪಂಜಾಬ್ ತಂಡ ಚಂಡೀಗಡ ತಂಡದೊಂದಿಗೆ ಗೋಲುರಹಿತ ಡ್ರಾ ಸಾಧಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News