ಬಿಜೆಪಿ ಸಂಸದರಿಗೆ ನಮೋ ಆ್ಯಪ್ ಭೀತಿ? !

Update: 2019-01-15 04:09 GMT

ಹೊಸದಿಲ್ಲಿ, ಜ. 15: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಲವು ಮಂದಿ ಬಿಜೆಪಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ನಮೋ ಆ್ಯಪ್ ಎಲ್ಲ ಟಿಕೆಟ್ ಆಕಾಂಕ್ಷಿಗಳಿಗೆ ನಡುಕ ಹುಟ್ಟಿಸಿದೆ.

ಎಲ್ಲ ಕ್ಷೇತ್ರಗಳಲ್ಲಿ ತಲಾ ಮೂವರು ಅತ್ಯಂತ ಜನಪ್ರಿಯ ನಾಯಕರ ಬಗ್ಗೆ ಪಕ್ಷದ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸುವ ಸಲುವಾಗಿ ನಮೋ ಆ್ಯಪ್ ಸಮೀಕ್ಷೆಗೆ ಮುಂದಾಗಿರುವುದು ಇದಕ್ಕೆ ಕಾರಣ.

"ಪೀಪಲ್ಸ್ ಪಲ್ಸ್" ಹೆಸರಿನ ಈ ಸಮೀಕ್ಷೆ, ಆಯಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಮೂಲ ಮಾಹಿತಿ ಕಣಜವಾಗಲಿದೆ. ಸಮೀಕ್ಷೆಯ ಹಲವು ಪ್ರಶ್ನೆಗಳ ಪೈಕಿ ನಿಮ್ಮ ಕ್ಷೇತ್ರದ ಮೂವರು ಅತ್ಯಂತ ಜನಪ್ರಿಯ ಬಿಜೆಪಿ ನಾಯಕರು ಯಾರು ಎಂಬ ಪ್ರಶ್ನೆಯಂತೂ ಎಲ್ಲ 268 ಬಿಜೆಪಿ ಸಂಸದರ ಗಮನ ಸೆಳೆದಿದೆ. ಜನ ಹೆಚ್ಚಿನ ಸಂಖ್ಯೆಯಲ್ಲಿ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಸ್ವತಃ ಮೋದಿ ಕಿರು ವಿಡಿಯೊ ಮೂಲಕ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ಪಕ್ಷಾಧ್ಯಕ್ಷ ಅಮಿತ್ ಶಾ ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಜನ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಟ್ವಿಟ್ಟರ್ ಮೂಲಕ ಕೋರಿದ್ದಾರೆ. ನಮ್ಮ ಆಡಳಿತ ಮತ್ತು ಕ್ಷೇತ್ರದ ಬಗ್ಗೆ ಅಭಿಪ್ರಾಯಗಳನ್ನು ಪ್ರಧಾನಿ ಮೋದಿ ಜತೆ ಹಂಚಿಕೊಳ್ಳಲು ಇದು ಒಳ್ಳೆಯ ಸಂದರ್ಭ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News