ಎರಡನೇ ಏಕದಿನ: ಭಾರತಕ್ಕೆ 299 ರನ್ ಗುರಿ

Update: 2019-01-15 07:20 GMT

ಅಡಿಲೇಡ್, ಜ.15: ಶಾನ್ ಮಾರ್ಷ್ ಆಕರ್ಷಕ ಶತಕದ ನೆರವಿನಿಂದ ಆಸ್ಟ್ರೇಲಿಯ ತಂಡ ಭಾರತಕ್ಕೆ ಎರಡನೇ ಏಕದಿನ ಪಂದ್ಯದ ಗೆಲುವಿಗೆ 299 ರನ್ ಗುರಿ ನೀಡಿದೆ.

 ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿತು. ಭಾರತದ ಪರ ಭುವನೇಶ್ವರ ಕುಮಾರ್ (45ಕ್ಕೆ 4) ಹಾಗೂ ಮುಹಮ್ಮದ್ ಶಮಿ(3-58)ಏಳು ವಿಕೆಟ್‌ಗಳನ್ನು ಹಂಚಿಕೊಂಡರು.

  189 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿರುವ ಆಸ್ಟ್ರೇಲಿಯದ ಆರಂಭ ಕಳಪೆಯಾಗಿತ್ತು. ಆಗ ತಂಡಕ್ಕೆ ಆಸರೆಯಾಗಿ ನಿಂತ ಶಾನ್ ಮಾರ್ಷ್ 108 ಎಸೆತಗಳಲ್ಲಿ 7ನೇ ಶತಕ ದಾಖಲಿಸಿದರು. ಭಾರತ ವಿರುದ್ಧ 2ನೇ ಶತಕ (131, 123 ಎಸೆತ, 11 ಬೌಂಡರಿ, 3 ಸಿಕ್ಸರ್)ದಾಖಲಿಸಿದ ಅವರು ನಾಲ್ವರು ದಾಂಡಿಗರೊಂದಿಗೆ ಅರ್ಧಶತಕ ಜೊತೆಯಾಟ ನಡೆಸಿ ತಂಡ ಉತ್ತಮ ಸ್ಕೋರ್ ಗಳಿಸಲು ನೆರವಾದರು.

ಉಸ್ಮಾನ್ ಖ್ವಾಜಾರೊಂದಿಗೆ 3ನೇ ವಿಕೆಟ್‌ಗೆ 56, ಹ್ಯಾಂಡ್ಸ್‌ಕಾಂಬ್‌ರೊಂದಿಗೆ 4ನೇ ವಿಕೆಟ್‌ಗೆ 52 ಹಾಗೂ ಸ್ಟೋನಿಸ್‌ರೊಂದಿಗೆ 5ನೇ ವಿಕೆಟ್‌ಗೆ 55 ರನ್ ಜೊತೆಯಾಟ ನಡೆಸಿದರು. ಆಲ್‌ರೌಂಡರ್ ಮ್ಯಾಕ್ಸ್‌ವೆಲ್(48) ಜೊತೆ ಕೈಜೋಡಿಸಿದ ಮಾರ್ಷ್ 6ನೇ ವಿಕೆಟ್‌ಗೆ 96 ರನ್ ಜೊತೆಯಾಟ ನಡೆಸಿ ತಂಡದ ಸ್ಕೋರ್ 298ಕ್ಕೆ ತಲುಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News