ಮತದಾನದಲ್ಲಿ ಭಾಗವಹಿಸಲು ಹೆರಿಗೆಯನ್ನೇ ಮುಂದೂಡಿದ ಸಂಸದೆ !

Update: 2019-01-15 15:00 GMT

ಲಂಡನ್, ಜ. 15: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವುದಕ್ಕೆ (ಬ್ರೆಕ್ಸಿಟ್) ಸಂಬಂಧಿಸಿದ ಒಪ್ಪಂದಕ್ಕೆ ಅನುಮೋದನೆ ನೀಡುವ ಮತದಾನದಲ್ಲಿ ಭಾಗವಹಿಸುವುದಕ್ಕಾಗಿ ಬ್ರಿಟನ್‌ನ ಸಂಸದೆಯೊಬ್ಬರು ಮಂಗಳವಾರ ತನ್ನ ಹೆರಿಗೆಯನ್ನೇ ಮುಂದೂಡಿದ್ದಾರೆ.

36 ವರ್ಷದ ತುಲಿಪ್ ಸಿದ್ದೀಕ್ ಮಂಗಳವಾರ ಸಿಸೇರಿಯನ್ ಶಸ್ತ್ರಕ್ರಿಯೆಗೆ ಒಳಗಾಗಬೇಕಾಗಿತ್ತು. ಆದರೆ, ಲಂಡನ್ ಮತ್ತು ಬ್ರಸೆಲ್ಸ್ ನಡುವೆ ಆಗಿರುವ ವಿಚ್ಛೇದನ ಒಪ್ಪಂದದ ಮತದಾನದಲ್ಲಿ ಅವರು ಭಾಗವಹಿಸಲು ಸಾಧ್ಯವಾಗುವಂತೆ ಶಸ್ತ್ರಕ್ರಿಯೆಯನ್ನು ಗುರುವಾರ ನಡೆಸಲು ವೈದ್ಯರು ಒಪ್ಪಿದ್ದಾರೆ.

ಪ್ರತಿಪಕ್ಷ ಲೇಬರ್ ಸಂಸದೆಯಾಗಿರುವ ಅವರನ್ನು ಸಂಸತ್ತಿನಲ್ಲಿ ಮತದಾನ ನಡೆಯುವ ಕೋಣೆಗೆ ಗಾಲಿಕುರ್ಚಿಯ ಮೂಲಕ ಕರೆದೊಯ್ಯಲಾಗುವುದು.

‘‘ನನ್ನ ಮಗ ಈ ಜಗತ್ತಿಗೆ ಬರುವುದು ವೈದ್ಯರು ಸೂಚಿಸಿದ ದಿನಕ್ಕಿಂತ ಒಂದು ದಿನ ತಡವಾದರೂ ಪರವಾಗಿಲ್ಲ. ಆ ದಿನ ಬ್ರಿಟನ್ ಮತ್ತು ಯುರೋಪ್ ನಡುವೆ ಉತ್ತಮ ಸಂಬಂಧ ಏರ್ಪಡುವ ದಿನ ಆಗಿರಬೇಕು. ಹಾಗಾದರೆ, ಈ ಹೋರಾಟ ಸಾರ್ಥಕ’’ ಎಂದು ಅವರು ‘ಲಂಡನ್ ಈವ್ನಿಂಗ್ ಸ್ಟಾಂಡರ್ಡ್’ ಪತ್ರಿಕೆಗೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News