ಗುಕೇಶ್ ಭಾರತದ ಅತ್ಯಂತ ಕಿರಿಯ ಚೆಸ್ ಗ್ರ್ಯಾಂಡ್‌ ಮಾಸ್ಟರ್

Update: 2019-01-15 16:01 GMT

ಚೆನ್ನೈ, ಜ.15: ಚೆನ್ನೈನ ಚದುರಂಗ ಚತುರ ಡಿ.ಗುಕೇಶ್ ಭಾರತದ ಅತ್ಯಂತ ಕಿರಿಯ ಗ್ರ್ಯಾಂಡ್‌ ಮಾಸ್ಟರ್ ಎಂಬ ಕೀರ್ತಿಗೆ ಭಾಜನರಾದರು. ಮಂಗಳವಾರ ನಡೆದ ದಿಲ್ಲಿ ಇಂಟರ್‌ ನ್ಯಾಶನಲ್ ಚೆಸ್ ಕೂಟದಲ್ಲಿ ಗುಕೇಶ್ ಈ ಸಾಧನೆ ಮಾಡಿದ್ದಾರೆ.

12 ವರ್ಷ, 7 ತಿಂಗಳು, 17 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಗುಕೇಶ್ ತಮ್ಮದೇ ರಾಜ್ಯದ ಆರ್. ಪ್ರಗ್ಯಾನಂದ(12 ವರ್ಷ,10 ತಿಂಗಳು)ಸಾಧನೆಯನ್ನು ಹಿಂದಿಕ್ಕಿದರು. ವಿಶ್ವದ ಅತ್ಯಂತ ಕಿರಿಯ ಗ್ರ್ಯಾಂಡ್‌ ಮಾಸ್ಟರ್ ಸೆರ್ಜೆ ಕರ್ಜಾಕಿನ್ಸ್ ದಾಖಲೆ ಮುರಿಯುವುದರಿಂದ ಸ್ವಲ್ಪದರಲ್ಲೇ ವಂಚಿತರಾದರು. ರಶ್ಯದ ಕರ್ಜಾಕಿನ್ಸ್ 12 ವರ್ಷ, 7 ತಿಂಗಳಲ್ಲಿ ಗ್ರ್ಯಾಂಡ್‌ ಮಾಸ್ಟರ್ ಎನಿಸಿಕೊಂಡಿದ್ದರು. 2013ರಲ್ಲಿ ಚೆಸ್ ಗೇಮ್ ಆಯ್ದುಕೊಂಡ ಗುಕೇಶ್ ಕಳೆದ 12 ತಿಂಗಳಿಂದ ಉತ್ತಮ ಫಾರ್ಮ್ ನಲ್ಲಿದ್ದಾರೆ. ಕಳೆದ ವರ್ಷ ಫ್ರಾನ್ಸ್‌ನಲ್ಲಿ ಐಎಂ ಪ್ರಶಸ್ತಿ ಬಾಚಿಕೊಂಡಿದ್ದರು. ಕಳೆದ ವರ್ಷದ ಎಪ್ರಿಲ್‌ನಲ್ಲಿ ಬ್ಯಾಂಕಾಕ್ ಓಪನ್ ಚೆಸ್ ಟೂರ್ನಿಯಲ್ಲಿ ಮೊದಲ ಬಾರಿ ಗ್ರ್ಯಾಂಡ್‌ ಮಾಸ್ಟರ್ ಗರಿ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News