ಹೃದಯಾಘಾತ: ಮೈದಾನದಲ್ಲೇ ಕುಸಿದು ಬಿದ್ದು ಕ್ರಿಕೆಟಿಗ ಮೃತ್ಯು

Update: 2019-01-15 15:59 GMT

ಕೋಲ್ಕತಾ, ಜ.15: ಕೋಲ್ಕತಾದ ಭರವಸೆಯ ಆಲ್‌ರೌಂಡರ್ ಅನಿಕೇತ್ ಶರ್ಮಾ ಮಂಗಳವಾರ ಕ್ರಿಕೆಟ್ ಮೈದಾನದಲ್ಲೇ ಕುಸಿದು ಬಿದ್ದರು. ಕೆಲವೇ ಕ್ಷಣಗಳ ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

21ರ ಹರೆಯದ ಅನಿಕೇತ್, ಪೈಕ್‌ಪರಾ ಕ್ರಿಕೆಟ್ ಕ್ಲಬ್‌ನ ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಆರ್‌ಜಿ ಕಾರ್ ಮೆಡಿಕಲ್ ಆಸ್ಪತ್ರೆ ತಿಳಿಸಿದೆ. ಮೃತ ಅನಿಕೇತ್ ತಂದೆ-ತಾಯಿಯನ್ನು ಅಗಲಿದ್ದಾರೆ.

ಎಡಗೈ ಆಟಗಾರ ಅನಿಕೇತ್ ಬಲಗೈ ಸ್ಪಿನ್ನರ್ ಆಗಿದ್ದರು. ಕಳೆದ ವರ್ಷ ಕ್ಲಬ್‌ಗೆ ಸೇರಿದ್ದರು.

ಅವರೋರ್ವ ಉತ್ತಮ ಕ್ರಿಕೆಟಿಗನಾಗಿದ್ದರು. ಅವರ ಸಾವಿನ ಸುದ್ದಿ ಕೇಳಿ ನಮಗೆ ಆಘಾತವಾಗಿದೆ ಎಂದು ಅನಿಕೇತ್ ಕೋಚ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News