ಪೂರ್ವ ಪದವೀಧರರಿಗೆ ಎಚ್-1ಬಿ ವೀಸಾ: ಭಾರತೀಯ ಐಟಿ ಕಂಪೆನಿಗಳ ಮೇಲೆ ಪರಿಣಾಮ

Update: 2019-01-15 17:34 GMT

ಮುಂಬೈ,ಜ.15: ಎಚ್-1ಬಿ ವೀಸಾ ಪಡೆಯಲು ಇರುವ ನಿಯಮಗಳಲ್ಲಿ ಅಮೆರಿಕ ಮಾಡಿರುವ ಕೆಲವೊಂದು ಬದಲಾವಣೆಗಳಿಂದ ಭಾರತೀಯ ಮಾಹಿತಿ ತಂತ್ರಜ್ಞಾನ ಕಂಪೆನಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

ಎಚ್-1ಬಿ ವೀಸಾ ನಿಯಮಗಳಲ್ಲಿ 2018ರ ಡಿಸೆಂಬರ್‌ನಲ್ಲಿ ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆ ಇಲಾಖೆ (ಯುಎಸ್‌ಸಿಐಎಸ್) ಪೂರ್ವ ಪದವಿ ಹೊಂದಿರುವವರಿಗೆ ಸುಲಭವಾಗುವಂತೆ ಬದಲಾವಣೆಗಳನ್ನು ಮಾಡಿತ್ತು. ಇದರಿಂದ ಅಮೆರಿಕದ ವಿಶ್ವವಿದ್ಯಾನಿಯಗಳಿಂದ ಮಾಸ್ಟರ್ಸ್ ಅಥವಾ ಉನತ ಪದವಿ ಹೊಂದದ ಅಭ್ಯರ್ಥಿಗಳಿಗೆ ಎಚ್-1ಬಿ ವೀಸಾ ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ವೀಸಾ ನೀಡುವಿಕೆಯಲ್ಲಿ ಶೇ.10 ಕಡಿಮೆಯಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಸೇವೆಗಳ ದರನಿಗದಿ ಒತ್ತಡ, ವೇತನ ಹಣದುಬ್ಬರ ಮತ್ತು ಕಳಪೆ ಆದಾಯ ಪ್ರಗತಿಯಂಥ ಅಂಶಗಳ ಜೊತೆಗೆ ಉದ್ದಿಮೆಗಳಲ್ಲಿ ಸ್ವದೇಶಿಗರಿಗೆ ಹೆಚ್ಚು ಅವಕಾಶ ನೀಡುತ್ತಿರುವುದೂ ಕುಸಿತಕ್ಕೆ ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News