ಮೋದಿಗೆ ಫಿಲಿಪ್ ಕೊಟ್ಲರ್ ಪ್ರಶಸ್ತಿ ಸುತ್ತ ವಿವಾದ: ಸ್ವತಃ ಕೊಟ್ಲರ್ ಹೇಳಿದ್ದೇನು?

Update: 2019-01-15 17:52 GMT

ಹೊಸದಿಲ್ಲಿ,ಜ.15: ಪ್ರಧಾನಿ ನರೇಂದ್ರ ಮೋದಿ ಪ್ರಪ್ರಥಮ ಫಿಲಿಪ್ ಕೊಟ್ಲರ್ ರಾಷ್ಟ್ರಪತಿ ಪ್ರಶಸ್ತಿ ಪಡೆದಿರುವ ಬಗ್ಗೆ ದೇಶದಲ್ಲಿ ವಾದವಿವಾದಗಳು ಏರ್ಪಟ್ಟಿರುವ ಮಧ್ಯೆಯೇ ತನ್ನ ಹೇಳಿಕೆ ನೀಡಿರುವ ಕೊಟ್ಲರ್ ಪ್ರಧಾನಿ ಮೋದಿಗೆ ಪ್ರಶಸ್ತಿ ನೀಡಿರುವುದನ್ನು ಅನುಮೋದಿಸುವುದಾಗಿ ತಿಳಿಸಿದ್ದಾರೆ.

ಇಂಡಿಯಾ ಟುಡೆ ಜೊತೆ ಮಾತನಾಡಿದ ಮಾರ್ಕೆಟಿಂಗ್ ಪರಿಣತ ಫಿಲಿಪ್ ಕೊಟ್ಲರ್, ನಾನು ಈ ಪ್ರಶಸ್ತಿಯನ್ನು ಸಂಪೂರ್ಣವಾಗಿ ಅನುಮೋದಿಸುತ್ತೇನೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಭಾರತೀಯ ಜೊತೆಗಾರರು ಪ್ರಶಸ್ತಿ ನೀಡುವ ಬಗ್ಗೆ ತಿಳಿಸಿದ್ದರೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೊಟ್ಲರ್, “ಇಲ್ಲ, ಭಾರತದ ಅಥವಾ ಯಾವುದೇ ಇತರ ಹೊರಗಿನ ವ್ಯಕ್ತಿಗಳು ನನ್ನನ್ನು ಭೇಟಿಯಾಗಿಲ್ಲ. ಓರ್ವ ಪ್ರಮುಖ ಸಾರ್ವಜನಿಕ ವ್ಯಕ್ತಿಗೆ ನಾವು ಪ್ರಶಸ್ತಿಯನ್ನು ನೀಡುತ್ತಿದ್ದೇವೆ ಎಂಬ ಬಗ್ಗೆ ನಮಗೆ ಯಾರಿಗೂ ತಿಳಿದಿರಲಿಲ್ಲ” ಎಂದು ಕೊಟ್ಲರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News