ಪಂದ್ಯ ಗೆದ್ದ ಅತ್ಯಂತ ಹಿರಿಯ ಆಟಗಾರ ಕಾರ್ಲೊವಿಕ್

Update: 2019-01-15 18:49 GMT

ಮೆಲ್ಬೋರ್ನ್, ಜ.15: ಕ್ರೊಯೇಶ್ಯದ 39 ವರ್ಷ ಪ್ರಾಯದ ಟೆನಿಸ್ ಆಟಗಾರ ಇವೊ ಕಾರ್ಲೊವಿಕ್ ಅವರು ಪೊಲೆಂಡ್‌ನ ಹ್ಯೂಬರ್ಟ್ ಹರ್ಕಝ್ ಅವರನ್ನು ಸೋಲಿಸುವ ಮೂಲಕ 40 ವರ್ಷಗಳ ನಂತರ ಅತ್ಯಂತ ಹಿರಿಯ ವಯಸ್ಸಿನಲ್ಲಿ ಆಸ್ಟ್ರೇಲಿಯನ್ ಓಪನ್ ಪಂದ್ಯದಲ್ಲಿ ಜಯಿಸಿದ ಸಾಧನೆ ಮಾಡಿದ್ದಾರೆ.

ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ತಮಗಿಂತ ಸುಮಾರು 18 ವರ್ಷ ಕಡಿಮೆ ವಯಸ್ಸಿನ ಹರ್ಕಝ್ ಅವರನ್ನು 6-7(5), 7-6(3), 7-6(5) ಸೆಟ್‌ಗಳ ಅಂತರದಿಂದ ಕಾರ್ಲೊವಿಕ್ ಮಣಿಸಿದರು. 1978ರ ಟೂರ್ನಿಯಲ್ಲಿ ಆಸ್ಟ್ರೇಲಿಯದ ಕೆನ್ ರೂಸ್‌ವೆಲ್ ತಮ್ಮ 44ನೇ ವಯಸ್ಸಿನಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದರು. 40 ವರ್ಷ ವಯಸ್ಸಿನ ಜಿಮ್ಮಿ ಕ್ಯಾನರ್ಸ್‌ 1992ರ ಯುಎಸ್ ಓಪನ್‌ನ ಎರಡನೇ ಸುತ್ತು ಪ್ರವೇಶಿಸಿದ ಸಾಧನೆಯ ಬಳಿಕ ಕಾರ್ಲೊವಿಕ್ ಯಾವುದೇ ಗ್ರಾನ್‌ಸ್ಲಾಮ್‌ನಲ್ಲಿ ಪಂದ್ಯ ಗೆದ್ದ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ವಿಶ್ವ ರ್ಯಾಂಕಿಂಗ್‌ನಲ್ಲಿ 73ನೇ ಸ್ಥಾನದಲ್ಲಿರುವ ಕಾರ್ಲೊವಿಕ್ ಇದೇ ಫೆಬ್ರವರಿ 28ಕ್ಕೆ ತಮ್ಮ 40ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News