×
Ad

ಚೆನ್ನೈನಿಂದ ದಿಲ್ಲಿವರೆಗೆ ಜ.21 ರಿಂದ ಸಿಲ್ವರ್ ಸೈಕಲ್‌ಥಾನ್

Update: 2019-01-16 22:14 IST

ಬೆಂಗಳೂರು, ಜ.16: ವೃದ್ಧಾಪ್ಯದ ಗಂಭೀರ ಅವಶ್ಯಕತೆಗಳ ಕುರಿತು ಜನರ ಗಮನ ಸೆಳೆಯುವ ಉದ್ದೇಶದಿಂದ ಹೆಲ್ಪೇಜ್ ಇಂಡಿಯಾ ಹಾಗೂ ಇತರೆ ಸಂಸ್ಥೆಗಳಿಂದ ಜ.21 ರಿಂದ ಸಿಲ್ವರ್ ಸೈಕಲ್‌ಥಾನ್ ಪ್ರವಾಸವನ್ನು ಚೆನ್ನೈನಿಂದ ದಿಲ್ಲಿವರೆಗೂ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಲ್ಪೇಜ್ ಇಂಡಿಯಾದ ಮುಖ್ಯಸ್ಥೆ ರೇಖಾಮೂರ್ತಿ, ಈ ಯಾತ್ರೆಯು ವೃದ್ಧಾಶ್ರಮಗಳಲ್ಲಿ ವೃದ್ಧರಿಗೆ ಕಲ್ಪಿಸಲಾಗುತ್ತಿರುವ ದೀರ್ಘಾವಧಿ ಯೋಗಕ್ಷೇಮದ ಸೌಲಭ್ಯಗಳನ್ನು ನೋಡುವುದು. ಆ ಮೂಲಕ ಮುಂದಿನ ದಿನಗಳಲ್ಲಿ ಸರಕಾರದೊಂದಿಗೆ ಚರ್ಚಿಸಿ ಎಲ್ಲ ರೀತಿಯ ಅನುಕೂಲ ಮಾಡುವುದು ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

2010 ರಲ್ಲಿ ಭಾರತದ ವೃದ್ಧರ ಸಂಖ್ಯೆ 91.6 ಮಿಲಿಯನ್‌ಗಿಂತಲೂ ಅಧಿಕವಾಗಿದೆ. ಇದು ಮುಂದಿನ 2025 ರ ವೇಳೆಗೆ 158.7 ಮಿಲಿಯನ್ ಆಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ, ಒಟ್ಟಾರೆ ವೃದ್ಧರಲ್ಲಿನ ಮೂರನೇ ಎರಡು ಭಾಗದಷ್ಟು ಮಂದಿ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ. ಇದರಲ್ಲಿ ಶೇ.50 ಕ್ಕೂ ಅಧಿಕ ಜನರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳು ಶೋಚನೀಯವಾಗಿದೆ ಎಂದು ಹೇಳಿದರು.

ಈ ಯಾತ್ರೆಯು ಅಂದಾಜು ನಾಲ್ಕು ಸಾವಿರ ಕಿ.ಮೀ.ಗಳಷ್ಟು ಪ್ರಯಾಣಿಸಲಿದ್ದು, ಆಯ್ದ ಮಾರ್ಗಗಳಲ್ಲಿ ವೃದ್ಧಾಶ್ರಮಗಳಿಗೆ ಭೇಟಿ ನೀಡಲಾಗುತ್ತದೆ. ಈ ಮೂಲಕ ಒಂಟಿಯಾಗಿ ಜೀವನ ಸಾಗಿಸುತ್ತಿರುವ ವೃದ್ಧರನ್ನು, ಅನಾರೋಗ್ಯ ಪೀಡಿತರನ್ನು, ಕ್ಷೋಭೆಗೀಡಾದ ವೃದ್ಧರನ್ನು ಸಂಪರ್ಕಿಸಲಾಗುತ್ತದೆ. ಯಾತ್ರೆಯು ಜ.21 ರಂದು ಚೆನ್ನೈನಿಂದ ಆರಂಭವಾಗಿ ಕರ್ನಾಟಕ, ಸಂಕೇಶ್ವರ್, ಸತಾರ, ಕೊಲ್ಹಾಪುರ, ಪುಣೆ, ಅಹಮದಾಬಾದ್, ಉದಯ್‌ಪುರ್, ಜೈಪುರ್, ಗುರ್‌ಗ್ರಾಮ್ ಮೂಲಕ ದಿಲ್ಲಿ ತಲುಪಲಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News