ಐತಿಹಾಸಿಕ ಏಕದಿನ ಸರಣಿ ವಶಪಡಿಸಿಕೊಂಡ ಭಾರತ

Update: 2019-01-18 11:11 GMT

ಮೆಲ್ಬೋರ್ನ್, ಜ.18: ಮಾಜಿ ನಾಯಕ ಎಂ.ಎಸ್. ಧೋನಿ ತಾಳ್ಮೆಯ ಅರ್ಧಶತಕ(ಔಟಾಗದೆ 87,114 ಎಸೆತ) ಹಾಗೂ ಕೇದಾರ್ ಜಾಧವ್ ಸಿಡಿಸಿದ 61 ರನ್ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿದೆ.

49.2 ಓವರ್‌ಗಳಲ್ಲಿ 234 ರನ್ ಗಳಿಸಿದ ಭಾರತ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ. ಆಸ್ಟ್ರೇಲಿಯ ನೆಲದಲ್ಲಿ ಇದೇ ಮೊದಲ ಬಾರಿ ದ್ವಿಪಕ್ಷೀಯ ಏಕದಿನ ಸರಣಿ ಜಯಿಸಿ ಐತಿಹಾಸಿಕ ಸಾಧನೆ ಮಾಡಿದೆ. ಇದೇ ವೇಳೆ ಭಾರತ ಎಲ್ಲ ಮೂರು ಮಾದರಿ ಕ್ರಿಕೆಟ್‌ನಲ್ಲಿ ಎರಡಕ್ಕಿಂತ ಹೆಚ್ಚು ಪಂದ್ಯಗಳನ್ನು ಒಳಗೊಂಡ ದ್ವಿಪಕ್ಷೀಯ ಸರಣಿಯನ್ನು ಆಸ್ಟ್ರೇಲಿಯದಲ್ಲಿ ಜಯಿಸಿದ ಮೊದಲ ಪ್ರವಾಸಿ ತಂಡವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಆಸೀಸ್ ನೆಲದಲ್ಲಿ ಈಗಾಗಲೇ ಮೊದಲ ಬಾರಿ ಟೆಸ್ಟ್ ಸರಣಿಯನ್ನು ಜಯಿಸಿದ್ದ ಕೊಹ್ಲಿ ಪಡೆ ಇತಿಹಾಸ ನಿರ್ಮಿಸಿತ್ತು. 2016ರ ಆಸೀಸ್ ಪ್ರವಾಸದಲ್ಲಿ ಟಿ-20 ಸರಣಿಯನ್ನು ಜಯಿಸಿತ್ತು.

 ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಫೀಲ್ಡಿಂಗ್ ಆಯ್ದುಕೊಂಡಿದ್ದ ಭಾರತ ತಂಡ ಆಸ್ಟ್ರೇಲಿಯವನ್ನು 48.4 ಓವರ್‌ಗಳಲ್ಲಿ 230 ರನ್‌ಗೆ ನಿಯಂತ್ರಿಸಿ ಗೆಲುವಿಗೆ ಸುಲಭ ಸವಾಲನ್ನೇ ಪಡೆದಿತ್ತು. 231 ರನ್ ಬೆನ್ನಟ್ಟಿದ ಭಾರತ ರೋಹಿತ್ ಶರ್ಮಾ(9)ರನ್ನು ಬೇಗನೆ ಕಳೆದುಕೊಂಡಿತು.

ಆಗ ಜೊತೆಯಾದ ನಾಯಕ ವಿರಾಟ್ ಕೊಹ್ಲಿ(46, 62 ಎಸೆತ) ಹಾಗೂ ಎಂಎಸ್ ಧೋನಿ 3ನೇ ವಿಕೆಟ್‌ಗೆ 54 ರನ್ ಸೇರಿಸಿ ತಂಡವನ್ನು ಆಧರಿಸಿದರು. ಕೊಹ್ಲಿ 46 ರನ್‌ಗೆ ಔಟಾದಾಗ ಧೋನಿಯೊಂದಿಗೆ ಕೈಜೋಡಿಸಿದ ಜಾಧವ್ 4ನೇ ವಿಕೆಟ್‌ಗೆ 121 ರನ್ ಜೊತೆಯಾಟ ನಡೆಸಿ ತಂಡಕ್ಕ ರೋಚಕ ಜಯ ತಂದುಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News