ಸ್ಪೀಕರ್ ಪೆಲೋಸಿ ಅಫ್ಘಾನ್ ಪ್ರವಾಸಕ್ಕೆ ಟ್ರಂಪ್ ತಡೆ

Update: 2019-01-18 14:45 GMT

ವಾಶಿಂಗ್ಟನ್, ಜ. 18: ಅಮೆರಿಕ ಸಂಸತ್ತು ಕಾಂಗ್ರೆಸ್‌ನಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಸ್ಪೀಕರ್ ಆಗಿರುವ ನ್ಯಾನ್ಸಿ ಪೆಲೊಸಿ ಅವರ ಅಫ್ಘಾನಿಸ್ತಾನ ಪ್ರವಾಸಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ತಡೆಯೊಡ್ಡಿದ್ದಾರೆ.

ಇದಕ್ಕೂ ಮೊದಲು, ಅಮೆರಿಕ ಸರಕಾರ ಆಂಶಿಕವಾಗಿ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ‘ಸ್ಟೇಟ್ ಆಫ್ ದ ಯೂನಿಯನ್’ ಭಾಷಣವನ್ನು ಮುಂದೂಡುವಂತೆ ಟ್ರಂಪ್‌ಗೆ ಪೆಲೋಸಿ ಸೂಚಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಪೆಲೋಸಿಯ ಅಫ್ಘಾನ್ ಪ್ರವಾಸಕ್ಕೆ ಟ್ರಂಪ್ ತಡೆಯೊಡ್ಡಿದ್ದಾರೆ ಎಂದು ಭಾವಿಸಲಾಗಿದೆ.

ತನ್ನ ನಿರ್ಧಾರವನ್ನು ಟ್ರಂಪ್ ಸ್ಪೀಕರ್‌ಗೆ ತಿಳಿಸಿದ್ದಾರೆ. ಅಮೆರಿಕ ರಾಜಕೀಯ ವ್ಯವಸ್ಥೆಯಲ್ಲಿ ಅಧ್ಯಕ್ಷರ ನಂತರದ ಸ್ಥಾನ ಇರುವುದು ಸ್ಪೀಕರ್‌ಗೆ ಹಾಗೂ ಅವರು ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪೈಕಿ ಒಬ್ಬರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News