ಟ್ರೋಫಿ ಗೆದ್ದ ಭಾರತಕ್ಕೆ ಬಹುಮಾನವಿಲ್ಲ: ಆಸ್ಟ್ರೇಲಿಯ ವಿರುದ್ಧ ಗವಾಸ್ಕರ್ ಕಿಡಿ

Update: 2019-01-18 18:49 GMT

ಮೆಲ್ಬೋರ್ನ್, ಜ.18: ಐತಿಹಾಸಿಕ ಏಕದಿನ ಸರಣಿ ಜಯಿಸಿರುವ ಟೀಮ್ ಇಂಡಿಯಾಕ್ಕೆ ಯಾವುದೇ ನಗದು ಬಹುಮಾನ ನೀಡಿ ಗೌರವಿಸದ ಆತಿಥೇಯ ಆಸ್ಟ್ರೇಲಿಯ ವಿರುದ್ಧ ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಕಿಡಿಕಾರಿದ್ದಾರೆ.

ಪಂದ್ಯಶ್ರೇಷ್ಠ ಚಹಾಲ್ ಹಾಗೂ ಸರಣಿಶ್ರೇಷ್ಠ ಧೋನಿಗೆ ತಲಾ 500 ಯುಎಸ್ ಡಾಲರ್(ಸುಮಾರು ರೂ.35,500)ಬಹುಮಾನ ನೀಡಲಾಗಿತ್ತು. ಅದನ್ನು ಅವರು ಚಾರಿಟಿವೊಂದಕ್ಕೆ ದಾನ ನೀಡಿದ್ದಾರೆ. ಭಾರತ ತಂಡಕ್ಕೆ ಮಾಜಿ ದಾಂಡಿಗ ಆ್ಯಡಂ ಗಿಲ್‌ಕ್ರಿಸ್ಟ್ ಕೇವಲ ವಿಜೇತ ಟ್ರೋಫಿಯನ್ನು ಪ್ರದಾನಿಸಿದರು. ಯಾವುದೇ ನಗದು ಬಹುಮಾನ ನೀಡದ ಆಸೀಸ್‌ನ್ನು ತರಾಟೆಗೆ ತೆಗೆದುಕೊಂಡ ಗವಾಸ್ಕರ್,‘‘500 ಯುಎಸ್ ಡಾಲರ್ ನೀಡುವುದೆಂದರೆ ಏನರ್ಥ?ಆಯೋಜಕರು ಪ್ರಸಾರ ಹಕ್ಕಿನಿಂದ ಸಾಕಷ್ಟು ಆದಾಯ ಗಳಿಸುತ್ತಾರೆ. ಕ್ರೀಡಾಂಗಣದಲ್ಲಿ ಭಾರತೀಯರು ದೊಡ್ಡ ಸಂಖ್ಯೆಯಲ್ಲಿದ್ದರು. ಹಾಗಿದ್ದರೂ ಆಟಗಾರರಿಗೆ ಉತ್ತಮ ಬಹುಮಾನ ಮೊತ್ತ ನೀಡಲಿಲ್ಲವೇಕೆ?ಪ್ರಾಯೋಜಕರಿಂದ ದೊಡ್ಡ ಆದಾಯ ಬರುವುದಕ್ಕೆ ಆಟಗಾರರೇ ಕಾರಣ. ಬಂದ ಆದಾಯವನ್ನು ಆಟಗಾರರಿಗೆ ಹಂಚಬೇಕಾಗಿತ್ತು’’ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News