8 ವರ್ಷಗಳ ಬಳಿಕ ಧೋನಿ ಸರಣಿಶ್ರೇಷ್ಠ

Update: 2019-01-18 18:52 GMT

ಮೆಲ್ಬೋರ್ನ್, ಜ.18: ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಲ್ಲಿ ನೀಡಿದ ಉತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ ಧೋನಿಗೆ ಸರಣಿಶ್ರೇಷ್ಠ ಗೌರವ ಒಲಿದು ಬಂದಿದೆ.  2011ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ತವರು ಸರಣಿಯಲ್ಲಿ ಭಾರತದ ಮಾಜಿ ನಾಯಕನಿಗೆ ಈ ಗೌರವ ಒಲಿದಿತ್ತು. ಅದಾದ 8 ವರ್ಷಗಳ ಸುದೀರ್ಘ ಅವಧಿಯ ಬಳಿಕ ಮತ್ತೊಮ್ಮೆ ಅವರು ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ. 37 ವರ್ಷ, 195 ವಯಸ್ಸಿನ ಧೋನಿ ಸರಣಿಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಭಾರತದ ಹಿರಿಯ ಕ್ರಿಕೆಟಿಗ ಎನಿಸಿಕೊಂಡು 32 ವರ್ಷ ಹಳೆಯ ದಾಖಲೆ ಮುರಿದು ಇತಿಹಾಸ ನಿರ್ಮಿಸಿದರು. ಈ ಹಿಂದೆ 1987ರಲ್ಲಿ ಸುನೀಲ್ ಗವಾಸ್ಕರ್ ತನ್ನ 37ನೇ ವರ್ಷ, 19 ದಿನದಲ್ಲಿ ಈ ಸಾಧನೆ ಮಾಡಿದ್ದರು. ಏಕದಿನದಲ್ಲಿ 7ನೇ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ ಈ ಮೂಲಕ ವಿರಾಟ್ ಕೊಹ್ಲಿ, ಸೌರವ್ ಗಂಗುಲಿ, ಯುವರಾಜ್ ಸಿಂಗ್, ಹಾಶಿಮ್ ಅಮ್ಲ, ವಿವಿ ರಿಚರ್ಡ್, ಎಬಿಡಿ ವಿಲಿಯರ್ಸ್ ದಾಖಲೆ ಸರಿಗಟ್ಟಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News