ಭಾರತದಲ್ಲಿ ಮಹಿಳೆಯರನ್ನು ಗೌರವಿಸಬೇಕು ಎಂದು ಹೇಳುತ್ತಾರೆ, ಆದರೆ ಗೌರವಿಸುವವರು ಕಡಿಮೆ: ಪಿ.ವಿ. ಸಿಂಧು

Update: 2019-01-20 11:49 GMT

ಹೊಸದಿಲ್ಲಿ, ಜ.20: ವಿದೇಶಗಳಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿದ್ದು, ಭಾರತದಲ್ಲಿ ಈ ಬಗ್ಗೆ ಮಾತನಾಡಲಾಗುತ್ತದೆಯೇ ಅದನ್ನು ಪಾಲಿಸುವವರು ಮಾತ್ರ ಕಡಿಮೆ ಎಂದು ಭಾರತದ ಶಟ್ಲರ್ ಪಿ.ವಿ. ಸಿಂಧು ಹೇಳಿದ್ದಾರೆ.

ಹೈದರಾಬಾದ್ ಪೊಲೀಸರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇತರ ದೇಶಗಳಲ್ಲಿ ಮಹಿಳೆಯರನ್ನು ಹೆಚ್ಚು ಗೌರವಿಸಲಾಗುತ್ತಿದೆ ಎಂಬ ಬಗ್ಗೆ ನನಗೆ ಸಂತೋಷವಿದೆ. ಆದರೆ ಭಾರತದಲ್ಲಿ ಮಹಿಳೆಯರನ್ನು ಗೌರವಿಸಬೇಕು ಎಂದು ಜನರು ಹೇಳುತ್ತಾರೆ. ಆದರೆ ಅದನ್ನು ಮಾಡುವವರು ಮಾತ್ರ ಬಹಳ ಕಡಿಮೆ” ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News