ಜಗತ್ತಿನ ಅತೀ ಹಿರಿಯ ವ್ಯಕ್ತಿ ನೊನಾಕಾ ಇನ್ನಿಲ್ಲ

Update: 2019-01-20 16:31 GMT

ಟೋಕಿಯೊ,ಜ.20  : ಜಗತ್ತಿನ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿಯೆಂಬ ದಾಖಲೆ ಹೊಂದಿರುವ 113 ವರ್ಷದ ಮಸಾರೆ ನೊನಾಕಾ ತನ್ನ ಸ್ವಗೃಹದಲ್ಲಿ ರವಿವಾರ ಮುಂಜಾನೆ ನಿಧನರಾಗಿದ್ದಾರೆ.

ಉತ್ತರ ಜಪಾನ್‌ನ ಹೊಕೈಡೊದ ದ್ವೀಪದ ಅಶೋರೊ ಪಟ್ಟಣದಲ್ಲಿರುವ ತನ್ನ ನಿವಾಸದಲ್ಲಿ ಶನಿವಾರ ಮುಂಜಾನೆ ನಿದ್ರಿಸುತ್ತಿರುವಾಗಲೇ ನೊನಾಕೊ ಇಹಲೋಕವನ್ನು ತ್ಯಜಿಸಿದರೆಂದು ಅವರ ಕುಟುಂಬಿಕರು ತಿಳಿಸಿದ್ದಾರೆ. ನೊನಾಕಾ, ವೃದ್ಧಾಪ್ಯ ಸಹಜವಾದ ಕಾರಣಗಳಿಂದಾಗಿ ನಿಧನರಾಗಿದ್ದಾರೆಂದು ಅವರು ಹೇಳಿದ್ದಾರೆ.

112 ವರ್ಷ 259 ದಿನಗಳ ಕಾಲ ಬದುಕಿರುವ ನೊನಾಕೊ ಅವರನ್ನು ಜಗತ್ತಿನ ಅತ್ಯಧಿಕ ವಯಸ್ಸಿನ ವ್ಯಕ್ತಿಯೆಂದು ಕಳೆದ ವರ್ಷ ಪ್ರಮಾಣಪತ್ರ ನೀಡಲಾಗಿತ್ತು.

1905ರ ಜುಲೈ 25ರಂದು ಜನಿಸಿದ ನೊನಾಕೊ ದೊಡ್ಡ ಕುಟುಂಬದಲ್ಲಿ ಜನಿಸಿದ್ದರು ಹಾಗೂ ತನ್ನ ಪಾಲಕರು ಆರಂಭಿಸಿದ್ದ ಹೊಟೇಲನ್ನು ನಡೆಸಿಕೊಂಡು ಬರುತ್ತಿದ್ದರು. ಇದೀಗ ಅದನ್ನು ಮೊಮ್ಮಗಳು ನಿರ್ವಹಿಸುತ್ತಿದ್ದಾರೆ. ನೊನಾಕಾ ಅವರು ಪತ್ನಿ ಹಾಗೂ ಐವರು ಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News