ಭಾರತ ತಂಡ, ಕೊಹ್ಲಿ ಅಗ್ರ ಸ್ಥಾನದಲ್ಲಿ ಸ್ಥಿರ

Update: 2019-01-21 18:51 GMT

ದುಬೈ, ಜ.21: ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯನ್ನು ಅಜೇಯವಾಗಿ ಕೊನೆಗೊಳಿಸಿದ ಭಾರತ ಕ್ರಿಕೆಟ್ ತಂಡ ಹಾಗೂ ನಾಯಕ ವಿರಾಟ್ ಕೊಹ್ಲಿ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡಿದ್ದಾರೆ.

166 ಅಂಕಗಳನ್ನು ಗಳಿಸಿರುವ ಭಾರತ, ತಂಡಗಳ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿ ರಾರಾಜಿಸುತ್ತಿದ್ದರೆ, 922 ಅಂಕಗಳನ್ನು ಗಳಿಸಿರುವ ತಂಡದ ನಾಯಕ ವಿರಾಟ್ ಕೊಹ್ಲಿ ದಾಂಡಿಗರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮಿಂಚುತ್ತಿದ್ದಾರೆ.

ಕೊಹ್ಲಿಗಿಂತ 25 ಅಂಕ ಹಿಂದಿರುವ ನ್ಯೂಝಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್(897) ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯ ಪ್ರವಾಸದಲ್ಲಿ ತಮ್ಮ ಅಮೋಘ ಬ್ಯಾಟಿಂಗ್‌ನಿಂದ ಅಂಕಗಳನ್ನು ಹೆಚ್ಚಿ ಸಿಕೊಂಡಿರುವ ಭಾರತದ ಚೇತೇಶ್ವರ ಪೂಜಾರ(881) ದಾಂಡಿಗರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಯಂಗ್‌ಟರ್ಕ್ ವಿಕೆಟ್ ಕೀಪರ್ ರಿಷಭ್ ಪಂತ್ ಅಗ್ರ 20ರ ರ್ಯಾಂಕಿಂಗ್‌ಗೆ ತಲುಪಿದ್ದು, ಜೀವನಶ್ರೇಷ್ಠ 17ನೇ ಸ್ಥಾನದಲ್ಲಿ ಮಿಂಚುತ್ತಿದ್ದಾರೆ.

ಬೌಲರ್‌ಗಳ ಪಟ್ಟಿಯಲ್ಲಿ ರಬಾಡ ಪ್ರಥಮ ಸ್ಥಾನದಲ್ಲಿದ್ದಾರೆ. ಭಾರತದ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜ ಕ್ರಮವಾಗಿ 5 ಮತ್ತು 9ನೇ ಸ್ಥಾನದಲ್ಲಿದ್ದಾರೆ.

ತಂಡಗಳ ಪಟ್ಟಿಯಲ್ಲಿ ಭಾರತ 116 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ. 110 ರೇಟಿಂಗ್ ಹೊಂದಿರುವ ದ.ಆಫ್ರಿಕ ದ್ವಿತೀಯ ಹಾಗೂ 108 ರೇಟಿಂಗ್ ಅಂಕ ಹೊಂದಿರುವ ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿದೆ. ನ್ಯೂಝಿಲೆಂಡ್ 107 ರೇಟಿಂಗ್ ಅಂಕಗಳನ್ನು ಹೊಂದಿ ನಾಲ್ಕನೇ ಸ್ಥಾನ ಹಾಗೂ 101 ಅಂಕ ಹೊಂದಿರುವ ಆಸ್ಟ್ರೇಲಿಯ 5ನೇ ಸ್ಥಾನದಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News