ಬೆಂಗಳೂರು: ಕರಾವಳಿ ಫ್ರೆಂಡ್ಸ್ ಬೆಂಗಳೂರು, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ವತಿಯಿಂದ ಸಾರ್ವಜನಿಕ ರಕ್ತದಾನ ಶಿಬಿರ
ಬೆಂಗಳೂರು, ಜ. 23: ಕರಾವಳಿ ಫ್ರೆಂಡ್ಸ್ ಬೆಂಗಳೂರು ಮತ್ತು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯ ಸಹಯೋಗದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಮಲ್ಲೇಶ್ವರಂನ 8ನೇ ಕ್ರಾಸ್ ಸಂಪಿಗೆ ರೋಡ್‌ನ ಗಜಲಕ್ಷ್ಮೀ ಮಹಲ್ ಕಲ್ಯಾಣ ಮಂಟಪದಲ್ಲಿ ಇಂದು ನಡೆಯಿತು.
ಶಿಬಿರವನ್ನು ರಾಜ್ಯ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಕರಾವಳಿ ಫ್ರೆಂಡ್ಸ್ ಬಳಗವು ಹಲವು ಸಮಾಜಮುಖಿ ಕಾರ್ಯಕ್ರಮಗಳಿಂದ ಎಲ್ಲರ ಮನೆಮಾತಾಗಿದೆ. ಇದೀಗ ರಕ್ತದಾನ ಶಿಬಿರ ಕಾರ್ಯಕ್ರಮ ಏರ್ಪಡಿಸಿ ಬಹಳ ಉತ್ತಮವಾದ ಹಾಗೂ ಸಮಾಜದ ಮುಖ್ಯ ಬೇಡಿಕೆಯಾದ ರಕ್ತವನ್ನು ಸಂಗ್ರಹಿಸಿ ರಕ್ತದ ಕೊರತೆಯನ್ನು ನೀಗಿಸಲು ನಡೆಸಿದ ಕಾರ್ಯಕ್ರಮವೂ ನಿಜಕ್ಕೂ ನಾವೆಲ್ಲರೂ ಪ್ರಶಂಸಿಸಲೇ ಬೇಕಾಗಿದೆ ಎಂದು ಹೇಳಿದರು.
ಇದೇ ಸಂದರ್ಭ ಸೋಮವಾರ ನಿಧನರಾದ ಸಿದ್ಧಗಂಗಾ ಮಠದ ಶ್ರೀ ಡಾ. ಶಿವಕುಮಾರ ಸ್ವಾಮೀಜಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಮಲ್ಲೇಶ್ವರಂ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪ್ರಸಾದ್, ಜಯ ಕರ್ನಾಟಕ ಸಂಘಟನೆಯ ಮಲ್ಲೇಶ್ವರಂ ಕ್ಷೇತ್ರದ ಅಧ್ಯಕ್ಷ ಬಿ.ಎಚ್. ರಾಹುಲ್ ಆಚಾರ್ಯ, ಮಹಿಳಾ ಪತ್ರಕರ್ತೆ ಸವಿತಾ, ಬಿ.ಬಿ.ಎಂ.ಪಿ. ಮಲ್ಲೇಶ್ವರಂ ಕ್ಷೇತ್ರದ ಸದಸ್ಯ ಮಂಜುನಾಥ್ ರಾಜ್ ಹಾಗೂ ಹಿರಿಯ ಉದ್ಯಮಿ ಸುಚಿ ರುಚಿ ಇಸ್ಮಾಯಿಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆಯೋಜಕರಾದ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಅಡ್ಮಿನ್ ಮುಸ್ತಫಾ ಬೋಳಂತೂರು, ಹಾರಿಸ್ ಸುನ್ನತ್ ಕೆರೆ, ಅಜೇಯ್, ಕರಾವಳಿ ಫ್ರೆಂಡ್ಸ್ ಬಳಗದ ಅಡ್ಮಿನ್ ಶಫೀಕ್ ಬೋಳಂತೂರು, ಅಶ್ರಫ್ ಬೋಳಂತೂರು, ಸಲೀಂ, ಯಾಕೂಬ್, ನಿಸಾರ್ ಬೋಳ್ಯಾರ್, ಜಯ ಕರ್ನಾಟಕ ಸಂಘಟನೆಯ ಮುಖಂಡರುಗಳಾದ ಹಮೀದ್ ಬೋಳಂತೂರು, ಬಶೀರ್ ಬೋಳಂತೂರು ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.
ಬ್ಲಡ್ ಹೆಲ್ಪ್ ಕರ್ನಾಟಕ ಇದರ ಕಾರ್ಯನಿರ್ವಾಹಕ ಅಶ್ರಫ್ ಅರಬಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.