ಜನಾಂಗೀಯ ನಿಂದನೆಗೆ ಕ್ಷಮೆಯಾಚಿಸಿದ ಸರ್ಫರಾಝ್

Update: 2019-01-23 18:50 GMT

ಡರ್ಬನ್, ಜ.23: ದಕ್ಷಿಣ ಆಫ್ರಿಕದ ಆಲ್‌ರೌಂಡರ್ ಫೆಹ್ಲುಕ್ವಾವೊಗೆ ಜನಾಂಗೀಯ ನಿಂದನೆ ಮಾಡಿ ವಿವಾದಕ್ಕೆ ಸಿಲುಕಿದ್ದ ಪಾಕ್ ನಾಯಕ ಸರ್ಫರಾಝ್ ಅಹ್ಮದ್ ತನ್ನ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ.

ದ.ಆಫ್ರಿಕ ವಿರುದ್ಧ 2ನೇ ಏಕದಿನ ಪಂದ್ಯದ ವೇಳೆ ವಿಕೆಟ್‌ಕೀಪಿಂಗ್ ಮಾಡುತ್ತಿದ್ದಾಗ ಸರ್ಫರಾಝ್ ಅವರು ಪೆಹ್ಲುಕ್ವಾವೊಗೆ ಕರಿಯ ಎಂದು ಉರ್ದುವಿನಲ್ಲಿ ನಿಂದಿಸಿರುವುದು ಸ್ಟಂಪ್-ಮೈಕ್ರೊಫೋನ್‌ನಲ್ಲಿ ರೆಕಾರ್ಡ್ ಆಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳ ಸುರಿಮಳೆಯಾಗಿತ್ತು.

ನನ್ನ ಹತಾಶೆಯ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುವೆ. ಯಾರನ್ನೂ ನೋವಿಸುವ ಉದ್ದೇಶ ನನಗಿರಲಿಲ್ಲ. ನಾನು ಆಡಿದ ಮಾತು ಮೈಕ್ರೊಫೋನ್‌ನಲ್ಲಿ ರೆಕಾರ್ಡ್ ಆಗಿದ್ದು ದುರದೃಷ್ಟಕರ ಎಂದು ಅಹ್ಮದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News