ಎರಡನೇ ಏಕದಿನ: ನ್ಯೂಝಿಲೆಂಡ್ ವಿರುದ್ಧ ಭಾರತ ಜಯಭೇರಿ

Update: 2019-01-26 09:11 GMT

 ಬೇ ಓವಲ್, ಜ.26: ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಭರ್ಜರಿ ಅರ್ಧಶತಕದ ಕೊಡುಗೆ, ಕುಲದೀಪ್ ಯಾದವ್(4-45) ಕರಾರುವಾಕ್ ಬೌಲಿಂಗ್ ನೆರವಿನಿಂದ ಭಾರತ ತಂಡ ನ್ಯೂಝಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು 90 ರನ್‌ಗಳಿಂದ ಗೆದ್ದುಕೊಂಡಿದೆ.

ಈ ಗೆಲುವಿನ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯ ಜ.28ರಂದು ನಡೆಯಲಿದೆ.

ಟಾಸ್ ಜಯಿಸಿದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.  ಉತ್ತಮ ಆರಂಭ ಹಾಗೂ ಇನಿಂಗ್ಸ್ ಕೊನೆಯಲ್ಲಿ ಎಂಎಸ್ ಧೋನಿ ಹಾಗೂ ಕೇದಾರ್ ಜಾಧವ್ ಅಬ್ಬರದ ಬ್ಯಾಟಿಂಗ್ ಸಹಾಯದಿಂದ ಭಾರತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 324 ರನ್ ಗಳಿಸಿತು.

ಗೆಲ್ಲಲು ಕಠಿಣ ಗುರಿ ಪಡೆದ ನ್ಯೂಝಿಲೆಂಡ್ 40.2 ಓವರ್‌ಗಳಲ್ಲಿ 234 ರನ್‌ಗೆ ಆಲೌಟಾಯಿತು.

ಕಿವೀಸ್ ಪರ ಆಲ್‌ರೌಂಡರ್ ಬ್ರೆಸ್‌ವೆಲ್(57) ಅಗ್ರ ಸ್ಕೋರರ್ ಎನಿಸಿಕೊಂಡರು. ಟಿಮ್ ಲಥಾಮ್(34), ಆರಂಭಿಕ ಆಟಗಾರ ಮುನ್ರೊ (31),ನಿಕೊಲ್ಸ್(28) ಹಾಗೂ ರಾಸ್ ಟೇಲರ್(22)ಎರಡಂಕೆ ಸ್ಕೋರ್ ಗಳಿಸಿದರು. ಉಳಿದವರು ಕುಲದೀಪ್, ಭುವನೇಶ್ವರ ಕುಮಾರ್(2-42) ಹಾಗೂ ಚಹಾಲ್(2-52) ದಾಳಿಗೆ ತತ್ತರಿಸಿ ಬೇಗನೆ ವಿಕೆಟ್ ಒಪ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News