ಕತರ್ ಇಂಡಿಯನ್ ಸೋಷಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ರಕ್ತದಾನ ಶಿಬಿರ

Update: 2019-01-27 06:34 GMT

ದೋಹಾ, ಜ. 27: ಕತರ್ ಇಂಡಿಯನ್ ಸೋಷಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿಯು ಹಾಮದ್ ಮೆಡಿಕಲ್ ಕಾರ್ಪೊರೇಷನ್ ಸಹಯೋಗದೊಂದಿಗೆ ಭಾರತದ ಗಣರಾಜ್ಯೋತ್ಸವದ ಪ್ರಯುಕ್ತ ದೋಹಾದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಮೆಡಿಕಲ್ ಸಿಟಿಯ ಬ್ಲೆಡ್ ಡೋನರ್ಸ್ ಸೆಂಟರ್ ನಲ್ಲಿ ನಡೆದ  ರಕ್ತದಾನ ಶಿಬಿರದಲ್ಲಿ ಕ್ಯೂಐಎಸ್ಎಫ್ ನ ಕೇಂದ್ರ ಸಮಿತಿಯ ಕಾರ್ಯದರ್ಶಿ ಲತೀಫ್ ಮಡಿಕೇರಿ ಹಾಗೂ ಕರ್ನಾಟಕದ ಕಾರ್ಯದರ್ಶಿ ಝಮೀರ್ ಹಳೆಯಂಗಡಿ ಅವರು ರಕ್ತದಾನ ಮಾಡುವ ಮೂಲಕ ಚಾಲನೆ ನೀಡಲಾಯಿತು. ಮದ್ಯಾಹ್ನ ವರೆಗೂ ನಡೆದ ಶಿಬಿರದಲ್ಲಿ 115 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

ಇದಕ್ಕೂ ಮೊದಲು ಕರ್ನಾಟಕ ಘಟಕದ ಅಧ್ಯಕ್ಷ ನಝೀರ್ ಪಾಷಾ ಅಧ್ಯಕ್ಷತೆ ಯಲ್ಲಿ ಸಭಾ ಕಾರ್ಯಕ್ರಮವು ಜರಗಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕತರಿನ ಹಿರಿಯ ಕನ್ನಡಿಗ ಅಬ್ದುಲ್ ಹೈಸಾಬ್ ಅವರು ಮಾತನಾಡಿ ರಕ್ತದಾನದಂತಹ ಮಹಾಕಾರ್ಯ ಮಾಡುವ ಮೂಲಕ ಸೋಷಿಯಲ್ ಫೋರಂ ಅನಿವಾಸಿಗಳ ಪಾಲಿನ ಆಶಾಕಿರಣ ವಾಗಿದೆ ಹಾಗೂ ಇಂತಹ ಕೆಲಸಗಳ ಮೂಲಕ ಸಹೋದರತೆಯನ್ನು ಬಲಪಡಿಸಲು ಸಾಧ್ಯವಿದೆ ಎಂದು ಶುಭ ಹಾರೈಸಿದರು. ಇನ್ನೋರ್ವ ಅಥಿತಿಯಾದ ಕ್ಯೂಐಎಸ್ಎಫ್ ನ ಕೇಂದ್ರ ಸಮಿತಿಯ ಅಧ್ಯಕ್ಷರಾದ ಸಯೀದ್ ಕೊಮಾಚಿಯವರು ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಉಪಾಧ್ಯಕ್ಷ ಸಲಾಂ ಕುನ್ನುಂಗೈ ,ಇಂಡಿಯನ್ ಫೋಟರ್ನಿಟಿ ಫೋರಂ ರಾಜ್ಯಧ್ಯಕ್ಷ ಅಯೂಬ್ ಉಳ್ಳಾಲ, ಕ್ಯೂಐಎಸ್ಎಫ್ ನ ಕರ್ನಾಟಕದ ಉಪಾಧ್ಯಕ್ಷ ಝಿಯಾವುಲ್ ಹಕ್ಕ್ , ಹಾಮದ್ ಆಸ್ಪತ್ರೆಯ ಅಧಿಕಾರಿಗಳಾದ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.

ಕಾರ್ಯದರ್ಶಿ ಫಸೀವುದ್ದೀನ್ ತುಮಕೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ವಂದಿಸಿದರು.

Writer - ಸಾದತ್ ಬಜತ್ತೂರು

contributor

Editor - ಸಾದತ್ ಬಜತ್ತೂರು

contributor

Similar News