ಯುಎಇ: ಡಿ.ಕೆ.ಎಸ್.ಸಿ ಫ್ಯಾಮಿಲಿ ಮುಲಾಖತ್ ನಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆಗೆ ಸನ್ಮಾನ

Update: 2019-01-27 10:09 GMT

ದುಬೈ, ಜ. 27:  ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ರಾಷ್ಟ್ರಿಯ ಸಮಿತಿಯು ವುಡ್ ಲೀಂ ಪಾರ್ಕ್ ಸ್ಕೂಲ್ ಅಜ್ಮಾನ್ ನಲ್ಲಿ  ಹಮ್ಮಿ ಗೊಂಡ  ಗ್ರಾಂಡ್ ಕರಾವಳಿ ಫ್ಯಾಮಿಲಿ ಮುಲಾಖತ್ ಡಿ.ಕೆ.ಎಸ್.ಸಿ. ರಾಷ್ಟೀಯ ಸಮಿತಿ ಉಪಾಧ್ಯಕ್ಷರಾದ ಎಂ.ಇ.ಮೂಳೂರು ಅದ್ಯಕ್ಷತೆಯಲ್ಲಿ ನಡೆಯಿತು.

ಡಿ.ಕೆ.ಎಸ್.ಸಿ. ಯೂತ್ ವಿಂಗ್ ಗೌರವಾಧ್ಯಕ್ಷ ಸಯ್ಯದ್ ಸುಹೈಲ್ ತಂಙಳ್  ದುವಾದೊಂದಿಗೆ ಡಿ.ಕೆ.ಎಸ್.ಸಿ ರಾಷ್ಟ್ರಿಯ ಸಮಿತಿ ಅಧ್ಯಕ್ಷ ಹಾಜಿ ಇಕ್ಬಾಲ್ ಕಣ್ಣಂಗಾರ್, ಅಲ್ ಇಹ್ಸಾನ್ ಎಜುಕೇಷನ್ ಸೆಂಟರ್ ಮ್ಯಾನೇಜರ್ ಮೌಲಾನಾ ಮುಸ್ತಫಾ ಸಆದಿ ಹಾಗೂ ಪ್ಯಾಮಲಿ ಮುಲಾಖತ್  ಚೆಯರ್ಮೆನ್ ಅಬ್ದುಲ್ ಲತೀಫ್ ಮುಲ್ಕಿ ಉಪಸ್ಥಿತಿಯಲ್ಲಿ ಸೆಂಟ್ರಲ್ ಕಮಿಟಿ ನಿಕಟಪೂರ್ವ ಕಾರ್ಯಧ್ಯಕ್ಷ ಹಾಜಿ. ಅಬ್ದುಲ್ ಹಮೀದ್ ಉಳ್ಳಾಲ ಉದ್ಘಾಟಿಸಿದರು.

ತುಂಬೆ ಹಾಸ್ಪಿಟಲ್ ಸಹಯೋಗದೊಂದಿಗೆ ಏರ್ಪಡಿಸಿದ ಉಚಿತ ಅರೋಗ್ಯ ಶಿಬಿರವನ್ನು ಡಿ.ಕೆ.ಎಸ್.ಸಿ ರಾಷ್ಟ್ರಿಯ ಸಮಿತಿ ಕೋಶಾಧಿಕಾರಿ ಇಬ್ರಾಹಿಂ ಹಾಜಿ ಕಿನ್ಯ ಅದ್ಯಕ್ಷತೆಯಲ್ಲಿ ಡಿ.ಕೆ.ಎಸ್.ಸಿ ಅಧೀನ ಸಂಸ್ಥೆಯಾದ ಅಲ್ ಇಹ್ಸಾನ್ ಎಜುಕೇಷನ್ ಸೆಂಟರ್ ಮ್ಯಾನೇಜರ್ ಮೌಲಾನಾ ಮುಸ್ತಫಾ ಸಆದಿ ಉದ್ಘಾಟಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ  ಆಗಮಿಸಿದ್ದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಹಾಗೂ ಡಿ.ಕೆ.ಎಸ್.ಸಿ 20 ನೇ ವಾರ್ಷಿಕ ಸಮ್ಮೇಳನದ  ಚೆಯರ್ಮೆನ್ ಆಗಿದ್ದ ಹಿರಿಯ  ಸಾಮಾಜಿಕ ನೇತಾರ ಬಿ.ಎಂ.ಮಮ್ತಾಜ್ ಅಲಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 

ಮರ್ಕಝ್ ಮ್ಯಾನೇಜರ್ ಮುಸ್ತಫಾ ಸಆದಿ  ಮುಖ್ಯ ಪ್ರಭಾಷಣ ಗೈದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸೆಂಟ್ರಲ್ ಕಮಿಟಿ ನೇತಾರರಾದ ಹಾಜಿ ಹಾತಿಂ ಕೂಳೂರು, ಕೆ.ಎಚ್. ರಫೀಕ್ ಸೂರಿಂಜೆ, ಸುಲೈಮಾನ್ ಸೂರಿಂಜೆ, ಬಿ.ಸಿ.ಎಫ್.ಅಧ್ಯಕ್ಷ ಡಾ.ಯೂಸುಫ್, ಮೊಯಿದೀನ್ ವುಡ್ ವರ್ಕ್ಸ್ ನ  ಮೆನೇಜರ್ ಅನ್ವರ್, ವುಡ್ ಲೇಮ್ ಪಾರ್ಕ್ ಸ್ಕೂಲ್  ಸಿ.ಇ.ಒ. ಗಪೂರ್, ಇಕ್ಬಾಲ್ ಸಿದ್ದಕಟ್ಟೆ, ಹಾಜಿ ಹಸನಬ್ಬ ಕೊಳ್ನಾಡ್ ಉಪಸ್ಥಿತಿರಿದ್ದರು. 

ಎಡ್ವಕೇಟ್  ಇಬ್ರಾಹಿಂ ಖಲೀಲ್ ಅರಿಮಾಲ , ಸಮೀಮ್ ಇಂಜಿನಿಯರಿಂಗ್ ಮೆನೇಜಿಂಗ್ ಡೈರೆಕ್ಟರ್ ಹಾಜಿ.ಮುಹಮ್ಮದ್ ಡೆಂಜಿಪ್ಪಾಡಿ, ಇಬ್ರಾಹಿಂ ಸಖಾಫಿ ಕಿನ್ನಿಂಗಾರ್, ಅಲ್ ಅಜ್ವಾ ಪ್ರಿಂಟಿಂಗ್ ಪ್ರಸ್  ಮೆನೇಜಿಂಗ್ ಡೈರೆಕ್ಟರ್ ಇಬ್ರಾಹೀಂ ಬಳಿಯೂರು  ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ಹಿರಿಯ ನೇತಾರ ಹಾಜಿ.ಇಬ್ರಾಹಿಂ ಹಾಜಿ ಕಿನ್ಯ ಅವರನ್ನು  ಗೌರವಿಸಲಾಯಿತು.

ಡಿ.ಕೆ.ಎಸ್.ಸಿ  ನೇತಾರರಾದ ಹಾಜಿ.ಹಸನಬ್ಬ ಕೊಳ್ನಾಡು, ಅಬ್ದುಲ್ಲಾ ಕುಂಞ್ಞಿ ಪೆರುವಾಯಿ, ಹಾಜಿ.ನವಾಝ್ ಕೋಟೆಕ್ಕಾರ್,  ಕಮರುದ್ದೀನ್ ಗುರುಪುರ,  ನಜೀರ್ ಕಣ್ಣಂಗಾರ್, ಹಾಜಿ.ಅಬ್ದುಲ್ ರಹಿಮಾನ್ ಸಂಟ್ಯಾರ್, ಶಕೂರು ಮಣಿಲ, ಹಾಜಿ ಅಬ್ದುಲ್ಲಾ ಬೀಜಾಡಿ, ಮುಹಮ್ಮದ್ ಅಲಿ ಮೂಡುತೋಟ, ಅಫ್ಝಲ್ ಮಂಗಳೂರು, ಇಕ್ಬಾಲ್ ಕುಂದಾಪುರ, ಸಮದ್ ಬಿರಾಲಿ, ಹಾಜಿ.ಮೊಯಿದಿನ್ ಕುಟ್ಟಿ ಕಕ್ಕಿಂಜೆ, ಅಶ್ರಫ್ ಸತ್ತಿಕಲ್, ಮೊಯಿದೀನ್ಕುಂದಾಪುರ, ಅಕ್ಬರ್ ಅಲಿ ಸುರತ್ಕಲ್, ಇಸ್ಮಾಯಿಲ್ ಬಾಬಾ ಮೂಳೂರು, ಹಸನ್ ಭಾವ ಹಳೆಯಂಗಡಿ, ಉಮ್ಮರ್ ಎ.ಕೆ.ಪಾಣಾಜೆ, ಅಶ್ರಫ್ ಲತೀಫಿ, ಝಯಿನುದ್ದೀನ್ ಬೆಳ್ಳಾರೆ, ರಾಶೀದ್ ಕುವೆಂಜ, ಅಮಾನುಲ್ಲಾ ಕುಂದಾಪುರ, ಅಮೀರ್ ಮಡಿಕೇರಿ, ಜಮಾಲ್ ಬಜ್ಪೆ, ಲತೀಫ್ ಪುತ್ತೂರು, ಮೂಸೆ ಹಾಜಿ ಕಿನ್ಯ,  ರಪೀಕ್ ಸತ್ತಿಕಲ್,  ರಝಾಕ್ ಮಣಿಲ, ರಿಯಾಝ್ ಕಿನ್ಯ, ಅಬ್ದುಲ್ ಹಮೀದ್ ಸುಳ್ಯ , ಮುಸ್ತಾಕ್ ಕಿನ್ಯ , ರಪೀಕ್ ಮುಲ್ಕಿ, ಶರೀಫ್ ಕಡಮಾಜೆ, ಶಂಸುದ್ದೀನ್ ಕಣ್ಣಂಗಾರ್,   ಜಮಾಲ್ ಕಣ್ಣಂಗಾರ್, ರಹೀಮ್ ಮಂಡಿಯೂರು ಕನ್ಯಾನ, ರಜಬ್ ಉಚ್ಚಿಲ, ನವಾಝ್ ಕಿನ್ಯ,  ಆದಂ ಈಶ್ವರಮಂಗಿಲ ಅಲ್ಲದೆ ರಾಷ್ಟ್ರಿಯ ಸಮಿತಿ ಹಾಗೂ  ಯುನಿಟ್ ನೇತಾರರು ಕಾರ್ಯಕ್ರಮದ ವಿವಿಧ ಜವಾಬ್ದಾರಿಗಳನ್ನು ಪಡೆದು ಯಶಸ್ವಿಗೆ ಸಹಕರಿಸಿದರು.

ತುಂಬೆ ಹಾಸ್ಪಿಟಲ್ ಹಾಗೂ ಮೊಯಿದೀನ್ ವುಡ್ ವರ್ಕ್ಸ್ ಕಾರ್ಯಕ್ರಮದ ಮುಖ್ಯ ಪ್ರಯೋಜಕರಾಗಿ ಹಾಗೂ ವುಡ್ ಲೀಂ ಪಾರ್ಕ್ ಸ್ಕೂಲ್ ಅಜ್ಮಾನ್ ಸಹ ಪ್ರಾಯೋಜಕರಾಗಿ ಅಲ್ ಸುಹುಲ್ ಟ್ರೇಡಿಂಗ್ ಕಂ. ಲಿಮಿಟೆಡ್ ರಾಸ್ ಅಲ್ ಖೈಮಾ, ಮಿಲನೋ ಓಪ್ಟಿಕಲ್. ಹಾಜಿ.ಶೇಕ್ ಭಾವ ಮಂಗಳೂರು, ಅಬ್ದುಲ್ಲಾ ಮದುಮೂಲೆ, ರೋಯಲ್ ರಿಜಿಸ್, ಅಜ್ವಾ ಪ್ರಿಂಟಿಂಗ್ ಪ್ರೆಸ್ ಸಹಕರಿಸಿದರು.

ಪ್ರಸ್ತುತ ಕಾರ್ಯಕ್ರಮಕ್ಕೆ ಆಗಮಿಸಲು ಹೆಸರು ನೋಂದಾಯಿಸಿದ  ಒಬ್ಬರನ್ನು ಅದೃಷ್ಟ ಚೀಟಿ ಎತ್ತುವ ಮೂಲಕ ಒಬ್ಬರಿಗೆ ಪವಿತ್ರ ಉಮ್ರಾ ಯಾತ್ರೆಗೆ ಅವಕಾಶ ಕಲ್ಪಿಸಲಾಯಿತು. ಅದು  ಡಿ.ಕೆ.ಎಸ್.ಸಿ ಹಿರಿಯ ನೇತಾರರಾದ ಹಾಜಿ.ಮೊಯಿದೀನ್ ಕುಟ್ಟಿ ಕಕ್ಕಿಂಜೆ ದಿಬ್ಬ ಅವರ ಕೈಸೇರಿತು.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಲಾಖತ್ ಕಮಿಟಿ ಜನರಲ್ ಕನ್ವಿನರ್ ಸೈಫುದ್ದೀನ್ ಪಟೇಲ್ ಸ್ವಾಗತಿಸ ಭಾಷಣ ಹಾಗೂ ಸಮಾರೋಪ ಸಮಾರಂಭದ ಸ್ವಾಗತ ಭಾಷಣವನ್ನು ಡಿ.ಕೆ.ಎಸ್.ಸಿಯು.ಎ.ಇ ರಾಷ್ಟ್ರಿಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಯೂಸುಫ್ ಅರ್ಲಪದವು ನಿರ್ವಹಿಸಿದರು. ಕಾರ್ಯಕ್ರಮವನ್ನು ಉಮ್ಮರ್ ಮಾಸ್ಟರ್ ಸುಳ್ಯ ಹಾಗೂ ಕಮಲ್ ಅಜ್ಜಾವರ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News