ದಾಖಲೆಯ ಏಳನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ ಜೊಕೊವಿಕ್

Update: 2019-01-27 11:43 GMT

ಮೆಲ್ಬೋರ್ನ್, ಜ.27: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಸ್ಪೇನ್‌ನ ರಫೆಲ್ ನಡಾಲ್‌ರನ್ನು ನೇರ ಸೆಟ್‌ಗಳಿಂದ ಮಣಿಸುವುದರೊಂದಿಗೆ ಏಳನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಎತ್ತಿ ಹಿಡಿದರು. ಈಮೂಲಕ ಹೊಸ ದಾಖಲೆ ನಿರ್ಮಿಸಿದರು.

ರವಿವಾರ ನಡೆದ ಪುರುಷರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಜೊಕೊವಿಕ್ ವಿಶ್ವದ ನಂ.2ನೇ ಆಟಗಾರ ನಡಾಲ್‌ರನ್ನು 6-3, 6-2, 6-3 ಸೆಟ್‌ಗಳಿಂದ ಮಣಿಸಿದರು.

 ಇದು ಜೊಕೊವಿಕ್ ಜಯಿಸಿದ 15ನೇ ಗ್ರಾನ್‌ಸ್ಲಾಮ್ ಪ್ರಶಸ್ತಿಯಾಗಿದೆ. ಸತತ ಮೂರನೇ ಬಾರಿ ಗ್ರಾನ್‌ಸ್ಲಾಮ್ ಜಯಿಸಿ ಹ್ಯಾಟ್ರಿಕ್ ಸಾಧಿಸಿದ್ದಾರೆ.

 ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಅಮೆರಿಕದ ದಿಗ್ಗಜ ಪೀಟ್ ಸಾಂಪ್ರಸ್‌ಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ರೋಜರ್ ಫೆಡರರ್(20 ಪ್ರಶಸ್ತಿ) ಹಾಗೂ ನಡಾಲ್(17 ಪ್ರಶಸ್ತಿ)ಬಳಿಕದ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯನ್ ಓಪನ್‌ನಲ್ಲಿ ಜೊಕೊವಿಕ್ ಓರ್ವ ಯಶಸ್ವಿ ಆಟಗಾರನಾಗಿದ್ದು ಇದೀಗ ಏಳನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ರೋಜರ್ ಫೆಡರರ್ ಹಾಗೂ ಆಸ್ಟ್ರೇಲಿಯದ ದಿಗ್ಗಜ ರಾಯ್ ಎಮರ್ಸನ್ ದಾಖಲೆಯನ್ನು ಮುರಿದರು. ಈ ಇಬ್ಬರು ಆಟಗಾರರು ಆರು ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದಾರೆ. ಎಮರ್ಸನ್ ಓಪನ್ ಯುಗ ಆರಂಭಕ್ಕೆ ಮೊದಲು ಈ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News