ಜ.29: ‘ಗೌರಿ ದಿನ’ ವಿಶೇಷ ಉಪನ್ಯಾಸ

Update: 2019-01-28 17:24 GMT

ಬೆಂಗಳೂರು, ಜ. 28: ಹಿರಿಯ ಪರ್ತ್ರಕರ್ತೆ ಗೌರಿ ಲಂಕೇಶ್ ಹುಟ್ಟಿದ ದಿನದ ನೆನಪಿನಲ್ಲಿ ‘ಗೌರಿ ದಿನ’ ವಿಶೇಷ ಉಪನ್ಯಾಸವನ್ನು ನಾಳೆ(ಜ.29) ಸಂಜೆ 4ಗಂಟೆಗೆ ಇಲ್ಲಿನ ಲ್ಯಾಂಗ್ ಫೋರ್ಡ್ ರಸ್ತೆಯಲ್ಲಿನ ಸೈಂಟ್ ಜೋಸೆಫ್ ಕಾಲೇಜಿನ ಕ್ಸೇವಿಯರ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಕಳೆದ ಎರಡು ವರ್ಷಗಳಿಂದ ಕಾಣೆಯಾಗಿರುವ ಜೆಎನ್‌ಯು ವಿದ್ಯಾರ್ಥಿ ನಜೀಬ್ ಕುರಿತಂತೆ ಪೆಡೆಸ್ಟ್ರಿಯನ್ ಪಿಕ್ಚರ್ಸ್‌ ನಿರ್ಮಿಸಿರುವ ‘ಅಮ್ಮಿ’ ಕಿರುಚಿತ್ರ ಪ್ರದರ್ಶನ ಮತ್ತು ನಜೀಬ್ ತಾಯಿಯ ಜತೆಗೆ ಸಂವಾದ ನಡೆಯಲಿದೆ. ಪ್ರೊ.ಬಾಬು ಮ್ಯಾಥೂ ‘ಅಮ್ಮಿ’ಗೆ ಅಭಿನಂದನೆ ಸಲ್ಲಿಸಲಿದ್ದಾರೆ.

ಗೌರಿ ಲಂಕೇಶ್ ಬಗ್ಗೆ ವಾರ್ತಾಭಾರತಿ ಪತ್ರಿಕೆ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಉಪನ್ಯಾಸ ನೀಡಲಿದ್ದಾರೆ. ಇದೇ ವೇಳೆ ಗೌರಿ ಮೀಡಿಯಾ ಟ್ರಸ್ಟ್‌ನ www.nanugauri.com ವೆಬ್ ಆವೃತ್ತಿಯ ಲೋಕಾರ್ಪಣೆ ನಡೆಯಲಿದೆ ಎಂದು ತಿಳಿಸಲಾಗಿದೆ.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಮಾಜಿ ಶಾಸಕ ಎ.ಕೆ.ಸುಬ್ಬಯ್ಯ, ಜಿ.ಎನ್.ಗಣೇಶ್‌ ದೇವಿ, ವಿ.ಎಸ್.ಶ್ರೀಧರ್, ಕೆ.ಎಲ್.ಅಶೋಕ್ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಗೌರಿ ಸ್ಮಾರಕ ಟ್ರಸ್ಟ್ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News