ಚಾಲಕರ ಸಂಘಟನೆಗಳೊಂದಿಗೆ ಸಿಎಂ ಬಜೆಟ್ ಪೂರ್ವಭಾವಿ ಸಭೆ

Update: 2019-01-29 15:57 GMT

ಬೆಂಗಳೂರು, ಜ.29: ಪ್ರಸಕ್ತ ಸಾಲಿನ ಬಜೆಟ್ ಪೂರ್ವಭಾವಿ ಸಿದ್ಧತೆ ಹಿನ್ನೆಲೆಯಲ್ಲಿ ಮಂಗಳವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲಕರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಚಾಲಕರ ಬೇಡಿಕೆಗಳಾದ ಚಾಲಕರ ದಿನಾಚರಣೆಯನ್ನು ಸರಕಾರದಿಂದಲೇ ಆಚರಿಸಬೇಕು, ಎಲ್ಲ ವರ್ಗದ ಚಾಲಕರಿಗೂ ಇಎಸ್‌ಐ, ಪಿಎಫ್ ಸೌಲಭ್ಯ ಒದಗಿಸಬೇಕು, ಚಾಲಕರ ಅಭಿವೃದ್ಧಿಗೆ ನಿಗಮ ಮಂಡಳಿ ಸ್ಥಾಪಿಸಬೇಕು, ವಸತಿ ನಿರ್ಮಾಣ, ಖಾಸಗಿ ಫೈನಾನ್ಸ್ ಕಂಪನಿ ನೀಡುತ್ತಿರುವ ಕಿರುಕುಳ ಹಾಗೂ ಓಲಾ-ಊಬರ್ ಸಂಸ್ಥೆಯಲ್ಲಿ ಚಾಲಕರ ಮೇಲಿನ ದೌರ್ಜನ್ಯ ತಡೆಗಟ್ಟುವಂತೆ ಮುಖ್ಯಮಂತ್ರಿಗಳಿಗೆ ಗಂಡಸಿ ಸದಾನಂದಸ್ವಾಮಿ, ತನ್ವೀರ್ ಪಾಷ, ಆದರ್ಶ ಮಂಜುನಾಥ್, ನಾರಾಯಣಸ್ವಾಮಿ, ಸಂಪತ್, ಚಂದ್ರಕುಮಾರ್ ಹಾಗೂ ವಿವಿಧ ಸಂಘಟನೆಯ ಅಧ್ಯಕ್ಷರು ಮನವಿ ಸಲ್ಲಿಸಿ ಚರ್ಚೆ ನಡೆಸಿದರು.

ಸಂಘಟನೆಗಳ ಬೇಡಿಕೆ, ಸಲಹೆಗಳನ್ನು ಚರ್ಚಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಬಾರಿಯ ಬಜೆಟ್‌ನಲ್ಲಿ ಕೆಲವು ಪ್ರಮುಖ ಬೇಡಿಕೆಗಳನ್ನು ಪರಿಶೀಲಿಸಿ ಬಜೆಟ್‌ನಲ್ಲಿ ಆದ್ಯತೆ ನೀಡಲಾಗುವುದು ಬರವಸೆ ನೀಡಿದರು. ಸಾರಿಗೆ ಆಯುಕ್ತರು, ಪೊಲೀಸ್ ಆಯುಕ್ತರು, ಟ್ರಾಫಿಕ್ ಪೊಲೀಸ್ ಆಯುಕ್ತರು ಸಭೆಯಲ್ಲಿ ಪಾಲ್ಗೊಂಡು ಚರ್ಚೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News