ಇಂಗ್ಲೆಂಡ್ ಲಯನ್ಸ್ ವಿರುದ್ಧ ಚತುರ್ದಿನ ಪಂದ್ಯಕ್ಕೆ ರಾಹುಲ್ ಸೇರ್ಪಡೆ

Update: 2019-01-30 18:53 GMT

ಹೊಸದಿಲ್ಲಿ, ಜ.30: ಇಂಗ್ಲೆಂಡ್ ಲಯನ್ಸ್ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಮೊದಲ ಅನಧಿಕೃತ ಚತುರ್ದಿನ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಆಡಲಿದ್ದಾರೆ.

ಚತುರ್ದಿನ ಪಂದ್ಯ ಫೆ.7 ರಿಂದ 10ರ ತನಕ ಕೇರಳದ ವಯನಾಡ್‌ನಲ್ಲಿ ನಡೆಯಲಿದೆ.

ಮಹಾರಾಷ್ಟ್ರದ ಅಂಕಿತ್ ಭಾವ್ನೆ ನೇತೃತ್ವದ 14 ಸದಸ್ಯರ ತಂಡದಲ್ಲಿ ಜಾರ್ಖಂಡ್ ವೇಗದ ಬೌಲರ್ ವರುಣ್ ಆ್ಯರೊನ್ ಅವರಿದ್ದಾರೆ. ಆ್ಯರೊನ್ 2015ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಬೆಂಗಳೂರಿನಲ್ಲಿ ನಡೆದಿದ್ದ ಮಳೆಬಾಧಿತ ಟೆಸ್ಟ್‌ನಲ್ಲಿ ಭಾರತದ ಪರ ಕೊನೆಯ ಪಂದ್ಯ ಆಡಿದ್ದರು.

ದೇಶೀಯ ಕ್ರಿಕೆಟ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿರುವ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಲ್‌ರೌಂಡರ್ ಜಲಜ್ ಸಕ್ಸೇನ ಹಾಗೂ ಸಿದ್ದೇಶ್ ಲಾಡ್ ಕಳೆದ ಕೆಲವು ವರ್ಷಗಳಿಂದ ನೀಡಿರುವ ಉತ್ತಮ ಪ್ರದರ್ಶನ ಆಧಾರದಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

►ತಂಡ: ಅಂಕಿತ್ ಭಾವ್ನೆ(ನಾಯಕ), ಕೆ.ಎಲ್. ರಾಹುಲ್, ಎ.ಆರ್. ಈಶ್ವರನ್, ಪ್ರಿಯಾಂಕ್ ಪಾಂಚಾಲ್, ರಿಕಿ ಭುಯ್, ಸಿದ್ದೇಶ್ ಲಾಡ್, ಕೆ.ಎಸ್. ಭರತ್, ಜಲಜ್ ಸಕ್ಸೇನಾ, ಎಸ್.ನದೀಂ, ಮಾಯಾಂಕ್ ಮರ್ಕಂಡೆ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್, ಆವೇಶ್ ಖಾನ್, ವರುಣ್ ಆ್ಯರೊನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News