ಏಕದಿನ ಕ್ರಿಕೆಟ್: ಏಳನೇ ಕನಿಷ್ಠ ಮೊತ್ತ ದಾಖಲಿಸಿದ ಭಾರತ

Update: 2019-01-31 07:53 GMT

 ಹ್ಯಾಮಿಲ್ಟನ್, ಜ.31: ನ್ಯೂಝಿಲೆಂಡ್ ವಿರುದ್ಧ ಗುರುವಾರ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಕುಸಿತಕ್ಕೊಳಗಾದ ಭಾರತ ಕೇವಲ 92 ರನ್‌ಗೆ ಸರ್ವಪತನ ಕಂಡಿದೆ. ಖಾಯಂ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ನಾಯಕತ್ವ ಹೊಣೆ ವಹಿಸಿದ್ದರು.

ಕಿವೀಸ್ ವೇಗಿ ಟ್ರೆಂಟ್‌ಬೌಲ್ಟ್ ದಾಳಿ ಎದುರಿಸಲು ವಿಫಲವಾದ ಭಾರತದ ಅಗ್ರ ಕ್ರಮಾಂಕದ ದಾಂಡಿಗರು ಒಂದು ಹಂತದಲ್ಲಿ 55 ರನ್‌ಗೆ 8 ವಿಕೆಟ್‌ಗಳನ್ನು ಕಳೆದುಕೊಂಡಿದ್ದರು. ಬಾಲಂಗೋಚಿಗಳಾದ ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ 9ನೇ ವಿಕೆಟ್‌ಗೆ 25 ರನ್ ಸೇರಿಸಿ ತಂಡದ ಮೊತ್ತವನ್ನು 92ಕ್ಕೆ ತಲುಪಿಸಿದರು.

92 ರನ್ ಭಾರತ ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿದ ಏಳನೇ ಕನಿಷ್ಠ ಸ್ಕೋರಾಗಿದೆ. ಏಕದಿನ ಕ್ರಿಕೆಟ್ ಮಾದರಿಯಲ್ಲಿ ನ್ಯೂಝಿಲೆಂಡ್ ವಿರುದ್ಧ ಎರಡನೇ ಕನಿಷ್ಠ ಸ್ಕೋರ್ ಇದಾಗಿದೆ. 2010ರಲ್ಲಿ ಡಾಂಬುಲ್ಲಾದಲ್ಲಿ ಶ್ರೀಲಂಕಾ ವಿರುದ್ಧ 88 ರನ್ ಗಳಿಸಿ ಆಲೌಟಾಗಿತ್ತು.

ಭಾರತ 2000ರಲ್ಲಿ ಶಾರ್ಜಾದಲ್ಲಿ ಶ್ರೀಲಂಕಾ ವಿರುದ್ಧ ಕನಿಷ್ಠ ಮೊತ್ತ(54)ಗಳಿಸಿ ಆಲೌಟಾಗಿತ್ತು. ಟೀಮ್ ಇಂಡಿಯಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಏಳನೇ ಬಾರಿ 100 ರನ್ ದಾಟಲು ವಿಫಲವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News